ಕರಾವಳಿ

ಡಾ. ಹೆಗ್ಗಡೆಯವರಿಂದ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ.

Pinterest LinkedIn Tumblr

ಮಂಗಳೂರು,ಜ.11: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ‌ ಆವರಣದಲ್ಲಿ ಜನವರಿ ೨೭, ೨೮, ೨೯ರಂದು ‘ಸ್ವಚ್ಛ ಭಾಷೆ’ ‘ಸ್ಚಚ್ಛ ಜೀವನ’ ‘ಸ್ವಚ್ಛ ಸಮಾಜ’ ‘ಸ್ವಚ್ಛ ಭಾರತ’ ಎಂಬ ಆಶಯದೊಂದಿಗೆ, ಡಾ. ಕೆ. ಚಿನ್ನಪ್ಪ ಗೌಡರ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವ ೨೧ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನದ ಗೌರವಾಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು.

ಲಾಂಛನ ಬಿಡುಗಡೆ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ‌ ಅಧ್ಯಕ್ಷ ವಿಜಯ ರಾಘವ ಪಡ್ವೆಟ್ನಾಯ, ಕಾರ್ಯದರ್ಶಿ ಡಾ. ಎಂ. ದಯಾಕರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ, ಗೌರವ ಕಾರ್ಯದರ್ಶಿ ಡಾ. ಎಂ.ಪಿ ಶ್ರೀನಾಥ್ ಮತ್ತು ಪೊಳಲಿ ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು.

ಜಿಲ್ಲಾ ‌ಉಸ್ತುವಾರಿ ಸಚಿವರು ಹಾಗೂ ರಾಜ್ಯ‌ ಅರಣ್ಯ ಇಲಾಖೆ ಸಚಿವರಾದ ಬಿ. ರಮಾನಾಥ ರೈ‌ ಅವರ ನೇತೃತ್ವದಲ್ಲಿ ಹಾಗೂ ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮ್ಮೇಳನದ ಪೂರ್ವಾಸಿದ್ದತೆ ನಡೆಯುತ್ತಿದೆ.

Comments are closed.