ಕರಾವಳಿ

ಕಲಾವಿದ ಪ್ರಮೋದ್‌ರಾಜ್ ರಚಿಸಿದ ‘ಲಾಂಛನ’ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ

Pinterest LinkedIn Tumblr

ಮಂಗಳೂರು,ಜ.11: ಮಂಗಳೂರಿನ ಚಿತ್ರಕಲಾವಿದ ಪ್ರಮೋದ್‌ ರಾಜ್‌ ರಚಿಸಿರುವ ಲಾಂಛನವು ‌ಉಜಿರೆಯಲ್ಲಿ ಜರಗಲಿರುವ ೨೧ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಗೊಂಡಿದೆ.

ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನ ಐತಿಹಾಸಿಕ ನರಸಿಂಹಘಡ (ಗಡಾಯಿಕಲ್ಲು) ಬೆಟ್ಟದ ಹಿನ್ನಲೆಯಲ್ಲಿ ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಣಿ ಅರದಾಳ ಹಾಗೂ ಯಕ್ಷಗಾನದ ರಾಜ ಕಿರೀಟವನ್ನೊಳ ಗೊಂಡಂತೆ ತಾಳೆಗರಿಯಲ್ಲಿ ಲೇಖನಿಯಿಂದ ಬರೆಯುವ ದೃಶ್ಯ ‘ಲಾಂಛನದಲ್ಲಿ‌ ಅಡಕವಾಗಿದೆ. ಕಲಾವಿದ ಜಾನ್‌ಚಂದ್ರನ್‌ ಅವರ ನೇತೃತ್ವದ‌ ಆಯ್ಕೆ ಸಮಿತಿಯು ಈ ಲಾಂಛನವನ್ನು ಆಯ್ಕೆಗೊಳಿಸಿರುವುದಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Comments are closed.