ರಾಷ್ಟ್ರೀಯ

ಕಡಿಮೆ ಕೃಷಿ ಭೂಮಿಯದ ರೈತರೇ ಹೆಚ್ಚು ಆತ್ಮಹತ್ಯೆ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ ಶೇ.72ರಷ್ಟು ರೈತರು 2 ಹೆಕ್ಟೇರ್‍‍ಗಿಂತ ಕಡಿಮೆ ಕೃಷಿ ಭೂಮಿ ಹೊಂದಿದವರಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‍ಸಿಆರ್‍‌ಬಿ) ಹೇಳಿದೆ.

2015ರ ಎನ್‍ಸಿಆರ್‍‌ಬಿ ವರದಿ ಪ್ರಕಾರ, ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇ.2 ರಷ್ಟು ರೈತರು 10 ಹೆಕ್ಟೇರ್‍ ಗಿಂತ ಹೆಚ್ಚು ಭೂಮಿ ಹೊಂದಿದ್ದಾರೆ.

2015ರಲ್ಲಿ 8,007 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದರಲ್ಲಿ ನಾಲ್ಕನೇ ಒಂದು ಭಾಗದಷ್ಟು ರೈತರು 2 -10 ಹೆಕ್ಟೇರ್‍ ನಷ್ಟು ಕೃಷಿ ಭೂಮಿ ಹೊಂದಿದವರಾಗಿದ್ದಾರೆ.

ಬೆಳೆ ನಾಶದಿಂದಾಗಿ ಸಣ್ಣ ಕೃಷಿ ಭೂಮಿ ಹೊಂದಿರುವ ರೈತರೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಎನ್‍ಸಿಆರ್‍‌ಬಿ ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.45.2 ರಷ್ಟು ಮಂದಿ ಕಡಿಮೆ ಕೃಷಿಭೂಮಿ ಹೊಂದಿದ ರೈತರಾಗಿದ್ದಾರೆ. ಇನ್ನುಳಿದವರಲ್ಲಿ ಶೇ. 27.4 ರಷ್ಟು ರೈತರು ಸಾಮಾನ್ಯ ಹೆಚ್ಚು ಕೃಷಿ ಭೂಮಿ ಹೊಂದಿದವರಾಗಿದ್ದಾರೆ.

ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2010-11ರ ಅವಧಿಯಲ್ಲಿ ಶೇ. 67.1 ರಷ್ಟು ರೈತರು 1 ಹೆಕ್ಟೇರ್ ಗಿಂತ ಕಡಿಮೆ ಶೇ. 17.9 ರೈತರು (1-2 ಹೆಕ್ಟೇರ್), ಶೇ.14.3 ರೈತರು (2-10 ಹೆಕ್ಟೇರ್) ಶೇ.0.7ರಷ್ಟು ರೈತರು 10 ಹೆಕ್ಟೇರ್‍ ಗಿಂತ ಜಾಸ್ತಿ ಕೃಷಿ ಭೂಮಿ ಹೊಂದಿದ್ದಾರೆ.

Comments are closed.