ಕರಾವಳಿ

ಜೆಎನ್‌ಯು ವಿದ್ಯಾರ್ಥಿಗಳ ಅಮಾನತನ್ನು ಹಿಂದೆಗೆಯದಿದ್ದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ : ಎಸ್‌ಐ‌ಓ ರಾಜ್ಯಾಧ್ಯಕ್ಷ ರಫೀಕ್ ಬೀದರ್

Pinterest LinkedIn Tumblr

sio_protest_1

ಮಂಗಳೂರು: ದೇಶದ ವಿಶ್ವವಿದ್ಯಾನಿಲಯಗಳಲ್ಲಿ ವ್ಯವಸ್ಥಿತವಾಗಿ ದಲಿತ, ದಮನಿತ ಮತ್ತು ಇತರ ಕೆಳವರ್ಗದ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಷಡ್ಯಂತ್ರದ ಅಂಗವಾಗಿ ನ್ಯಾಯಯುತ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ಮಾಡುತ್ತಿದ್ದಂತಹ ಸುಮಾರು ಹದಿನೈದು ವಿದ್ಯಾರ್ಥಿಗಳನ್ನು ವಿನಾಕಾರಣವಾಗಿ ಜೆ ಎನ್ ಯು ಆಡಳಿತವು ಅಮಾನತುಗೋಳಿಸಿರುವುದು ಖೇದಕರ. ಅದ್ದರಿಂದಾಗಿ ಈ ಅಮಾನತ್ತನ್ನು ಹಿಂದೆತೆಗೆಯದಿದ್ದಲ್ಲಿ ಎಸ್ ಐ ಓ ವತಿಯಿಂದ ರಾಜ್ಯವಾಪಿ ಪ್ರತಿಭಟನೆಗಳನ್ನು ಕೈಗೊಳ್ಳಲಿರುವುದಾಗಿ ಎಸ್ ಐ ಓ ಕರ್ನಾಟಕ ಅಧ್ಯಕ್ಷ ಮುಹಮ್ಮದ್ ರಫೀಕ್ ಬೀದರ್ ತಿಳಿಸಿದ್ದಾರೆ.

sio_protest_2 sio_protest_3

ಅವರು ಹಲವಾರು ದಿನಗಳಿಂದ ಕಾಣೆಯಾಗಿರುವ ಜೆ ಎನ್ ಯು ವಿಧ್ಯಾರ್ಥಿ ಅಹ್ಮದ್ ನಜೀಬ್ ನನ್ನು ಪತ್ತೆ ಹಚ್ಚಲು ವಿಫಲರಾಗಿರುವ ಕೇಂದ್ರ ಸರ್ಕಾರ ಹಾಗೂ ದೆಹಲಿಯ ಪೊಲೀಸ್ ಇಲಾಖೆ ವಿರುದ್ಧ Where is Najeeb ಎಂಬ ಶೀರ್ಷಿಕೆಯಡಿ ದ.ಕ. ಜಿಲ್ಲಾಧಿಕಾರಿಯ ಕಛೇರಿಯ ಮುಂಭಾಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ಪ್ರಮುಖ ವಿಶ್ವವಿದ್ಯಾನಿಲಯವಾಗಿರುವ ಜೆ ಎನ್ ಯುವಿನ ಸಂಶೋಧನಾ ವಿದ್ಯಾರ್ಥಿ ನಜೀಬ್ ಕಾಣೆಯಾಗಿ ಸುಮಾರು 76ದಿನ ಕಳೆದರೂ ಜೆ ಎನ್ ಯು ಆಡಳಿತ ಕಾಣೆಯಾಗಿರುವುದಕ್ಕೆ ನಾನು ಹೊಣೆಯಲ್ಲ ಎಂದು ನುಣುಚಿಕೊಳ್ಳುತ್ತಿದೆ. ದಿಲ್ಲಿ ಪೋಲಿಸರು ಅದರ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಅದೇ ರೀತಿ ಕೇಂದ್ರ ಸರ್ಕಾರ ತನಗೆ ತಿಳಿದಿಲ್ಲವೆಂಬಂತೆ ಬೇಜವಾಬ್ದಾರಿಯುತವಾಗಿ ತಿಳಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

sio_protest_4 sio_protest_5

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆ‌ಎನ್‌ಯು ಸ್ನಾತಕೋತ್ತರ ವಿದ್ಯಾರ್ಥಿ ಸಾದಾತ್ ಹುಸೇನ್, ನಜೀಬ್‌ನ ಮೇಲೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳಾದ ವಿಕ್ರಾಂತ್, ಅಂಕಿತ್ ಮತ್ತು ಸುನಿಲ್ ಎಂಬವರು ಹ ನಡೆಸಿದ್ದು, ಪ್ರೋಕ್ಟ್ರಲ್ ಸಮಿತಿಯ ವರದಿಯಲ್ಲಿ ಸಾಬೀತಾದರೂ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದೇ, ಅವರನ್ನು ರಕ್ಷಿಸುವ ರೀತಿಯಲ್ಲಿ ವಸತಿ ನಿಲಯದಿಂದ ಬೇರೆ ವಸತಿ ನಿಲಯಕ್ಕೆ ವರ್ಗಾಯಿಸಿದ್ದು ಮತ್ತು ದೇಶದ ಗ್ರಾಮಾಂತರ ಪ್ರದೇಶ ಹಾಗೂ ದಲಿತ, ದಮನಿತ ವಿದ್ಯಾರ್ಥಿಗಳಿಗೆ M.Phil, P.hd ಯ ಮೌಖಿಕ ಪರಿಕ್ಷೇಯಲ್ಲಿ ಅನ್ಯಾಯ ಆಗುತ್ತಿರುವುದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಬ್ದುಲ್ ನಾಫಿ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕೆಂದು ನ್ಯಾಯಯುತವಾಗಿ ಪ್ರತಿಭಟನೆಯನ್ನು ಕೈಗೊಂಡ ಹದಿನೈದು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿರುವ ನಿಲುವು ದ್ವಂದ್ವತೆಯಿಂದ ಕೂಡಿದೆ. ವಿಶ್ವವಿದ್ಯಾನಿಲಯದ ಆಡಳಿತವು ಕೋಮುವಾದಿ ಶಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದವರು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಎಸ್ ಐ ಓ ರಾಜ್ಯ ಕಾರ್ಯದರ್ಶಿ ದಾನಿಶ್ ಪಾಣೆಮಂಗಳೂರು, ಜಿ ಕಾರ್ಯದರ್ಶಿ ಅಸ್ಲಂ ಪಂಜಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

sio_protest_6 sio_protest_7 sio_protest_8 sio_protest_9

ಎಸ್‌ಐ‌ಓದಿಂದ ನಜೀಬ್ ಎಲ್ಲಿದ್ದಾನೆ? ಪ್ರಾತ್ಯಕ್ಷಿಕೆ:

ನಾಪತ್ತೆಯಾಗಿರುವ ಜೆ ಎನ್ ಯು ವಿದ್ಯಾರ್ಥಿ ನಜೀಬ್ ನನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ತೆರಳಿದ ಪ್ರಾತ್ಯಕ್ಷಿಕೆ ರಾವ್ & ರಾವ್ ಸರ್ಕಲ್, ಜ್ಯೋತಿ ಸರ್ಕಲ್, ಕಂಕನಾಡಿ, ಮತ್ತು ಸಿಟಿ ಸೆಂಟರ್‌ನ ಎದುರು ಘೋಷಣೆಗಳನ್ನು ಕೂಗಿ ಸಮಾರೋಪ ಮಾಡಲಾಯಿತು.

Comments are closed.