ಕರಾವಳಿ

ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

Pinterest LinkedIn Tumblr

bantara_sanga_kavur_1

ಮಂಗಳೂರು: ಬಂಟರ ಸಂಘ ಕಾವೂರು (ರಿ) ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ , ಉಡುಪಿ ಮತ್ತು ಕಾಸರಗೋಡು ಅಂತರ್ ಜಿಲ್ಲಾ ಮಟ್ಟದ ಎಂಟನೇ ಬಂಟರ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕ್ರೀಡಾಕೂಟದ ಎಲ್ಲಾ ವಿಭಾಗಗಳಲ್ಲೂ ಭಾಗವಹಿಸಿದ ಸುರತ್ಕಲ್ ಬಂಟರ ಸಂಘದ ಸದಸ್ಯರು ಕ್ರೀಡಾಕೂಟದಲ್ಲಿ 21 ಪ್ರಥಮ ಸ್ಥಾನಗಳನ್ನು 22 ದ್ವಿತೀಯ ಸ್ಥಾನಗಳನ್ನು ಹಾಗೂ 17 ತೃತೀಯ ಸ್ಥಾನಗಳನ್ನು ಗಳಿಸಿಕೊಂಡಿದೆ.

ಮುಖ್ಯವಾಗಿ 100 ಮೀಟರ್, 200 ಮೀಟರ್. ಲಾಂಗ್ ಜಂಪ್ 400 ಮೀಟರ್ ರಿಲೇಯಲ್ಲಿ ಪುರುಷರು ಮತ್ತು ಮಹಿಳೆಯರು ಪ್ರಥಮ ಸ್ಥಾನಗಳನ್ನು ಗೆದ್ದುಕೊಂಡರು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ರನ್ನರ್‍ಸ್ ಆಫ್ ಪ್ರಶಸ್ತಿ ಲಭಿಸಿದೆ.

ವೈಯಕ್ತಿಕವಾಗಿ ಮೇಘಾ ಶೆಟ್ಟಿ ಬಾಳ, ಭವಿಷ್ ಶೆಟ್ಟಿ ಚೇಳ್ಯಾರ್, ಸಚಿತಾ ಶೆಟ್ಟಿ ಚೇಳ್ಯಾರ್, ಅಕ್ಷಯ್ ಶೆಟ್ಟಿ ಸುರತ್ಕಲ್, ಬಬಿತಾ ಶೆಟ್ಟಿ ಇಡ್ಯಾ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದರು,

ಸಮಾರಂಭದಲ್ಲಿ ಉಪಸ್ಥಿತರಿದ್ದ ಅರಣ್ಯ ಮತ್ತು ಪರಿಸರ ಸಚಿವರಾದ ಬಿ. ರಮಾನಾಥ ರೈ ಹಾಗೂ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ. ಸದಾನಂದ ಶೆಟ್ಟಿ ಅವರು ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು, ಕಾರ್ಯದರ್ಶಿ ಸೀತಾರಾಮ್ ರೈ ಹಾಗೂ ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಗುಣಶೇಖರ ಶೆಟ್ಟಿ ಅವರಿಗೆ ವಿತರಿಸಿದರು.

bantara_sanga_kavur_2 bantara_sanga_kavur_3 bantara_sanga_kavur_4 bantara_sanga_kavur_5

ಸಮಾರಂಭದಲ್ಲಿ ಕಾವೂರು ಬಂಟರ ಸಂಘದ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ, ಬಂಟರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಜಗನ್ನಾಥ ಚೌಟ, ಜಯಶೀಲ ಅಡ್ಯಂತಾಯ, ಸಂಘದ ಪದಾಧಿಕಾರಿಗಳಾದ ಬಿ. ಲಕ್ಷ್ಮಣ್ ಶೆಟ್ಟಿ, ಕೆ. ಸದಾಶಿವ ಶೆಟ್ಟಿ, ಆನಂದ ಶೆಟ್ಟಿ ವಿಠಲ ಆಳ್ವ, ಸುಧಾಕರ ಶೆಟ್ಟ, ರಾಮಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಸುರತ್ಕಲ್ ಬಂಟರ ಸಂಘದ ಸದಸ್ಯ ಭವಿಷ್ ಶೆಟ್ಟಿ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು.

ಬೆಳಗ್ಗೆ ನಡೆದ ಕ್ರೀಡಾ ಕೂಟವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಮೂಡದ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಸಂತೋಷ್ ಕುಮಾರ್ ಶೆಟ್ಟಿ ನಿಟ್ಟೆಗುತ್ತು ರವಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.