ರಾಷ್ಟ್ರೀಯ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಲ್ಪದರಲ್ಲಿ ತಪ್ಪಿದ ವಿಮಾನಗಳ ಡಿಕ್ಕಿ

Pinterest LinkedIn Tumblr

indigo-spicejet-aircrafts-come-face-to-face-at-delhi-airport-runway

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋರ ದುರಂತ ಪವಾಡ ಸದೃಶ ರೀತಿಯಲ್ಲಿ ತಪ್ಪಿದೆ. ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಳ್ಳವುದು ತಪ್ಪಿದೆ.

ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಇಂಡಿಗೋ ವಿಮಾನ ಟ್ಯಾಕ್ಸಿ ವೇನತ್ತ ಸಾಗಿದ್ದಾಗ, ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆಗುತ್ತಾ ಎದುರಿಗೆ ಬಂದಿದೆ. ಇನ್ನೇನು ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಬೇಕು ಎನ್ನುವಾಗ ಪೈಲಟ್‍ಗಳು ಜಾಗೃತರಾಗಿದ್ದಾರೆ. ಇದರಿಂದ ಅಪಘಾತ ತಪ್ಪಿದೆ.

ಏರ್‍ಟ್ರಾಫಿಕ್ ಕಂಟ್ರೋಲ್‍ನಲ್ಲಿ ತಲೆದೋರಿದ ಸಮಸ್ಯೆಯಿಂದ ಎರಡು ವಿಮಾನಗಳು ಅತಿ ಸಮೀಪಕ್ಕೆ ಆಗಮಿಸಿದ್ದವು ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಈ ಘಟನೆ ಕುರಿತು ಡಿಜಿಸಿಎ ವಿಚಾರಣೆಗೆ ಆದೇಶಿಸಿದೆ.

Comments are closed.