ಕರಾವಳಿ

ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಕಾರ್ಯ ಪ್ರಗತಿಯಲ್ಲಿದೆ :ಪ್ರೊ. ಬಿ.ಎಂ. ಇಚ್ಲಂಗೋಡು

Pinterest LinkedIn Tumblr

beary_sahithy_book_1

ಮಂಗಳೂರು, ಡಿಸೆಂಬರ್.27: ಬ್ಯಾರಿ ಭಾಷೆಯ ಪುನರುಜ್ಜೀವನಕ್ಕೆ ಅಕಾಡಮಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇದೀಗ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಪೂರಕವಾಗಿ ಬ್ಯಾರಿ ಜಾನಪದ ಕಥಾ ಸಂಕಲನ ಹೊರ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅವನತಿಯತ್ತ ಸಾಗುವ ಭಾಷೆಗಳ ಪುನರುಜ್ಜೀವನಕ್ಕೆ ಇಂತಹ ಪ್ರಯತ್ನ ಶ್ಲಾಘನಾರ್ಹ ಎಂದು ಹಿರಿಯ ಸಂಶೋಧಕ ಪ್ರೊ. ಬಿ.ಎಂ. ಇಚ್ಲಂಗೋಡು ಹೇಳಿದರು.

beary_sahithy_book_2

beary_sahithy_book_6 beary_sahithy_book_7

ಅವರು ಸೋಮವಾರ ನಗರದ ಬ್ಯಾರಿ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ, ಪತ್ರಕರ್ತ ಹಂಝ ಮಲಾರ್ ಸಂಪಾದಿಸಿದ ‘ಚನ್ನನ’ ಬ್ಯಾರಿ ಜಾನಪದ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿರು.

beary_sahithy_book_3

beary_sahithy_book_9 beary_sahithy_book_8

ಲೇಖಕ ಅಬ್ದುರ್ರಹ್ಮಾನ್ ಕುತ್ತೆತ್ತೂರು ಕೃತಿಯನ್ನು ಪರಿಚಯಿಸಿದರು. ಈ ಸಂಕಲನದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಪ್ರಭಾವವಿಲ್ಲ.ಅದು ಈ ಕೃತಿಯ ಹೆಗ್ಗಳಿಕೆಯಾಗಿದೆ. ಕಥಾಲೋಕದಿಂದ ದೂರ ಸರಿಯುವ ಯುವ ಜನಾಂಗಕ್ಕೆ ಇಂತಹ ಕೃತಿಗಳು ಭಾಷೆಯ ಮೇಲೆ ಅಭಿಮಾನ ಹುಟ್ಟಲು ಕಾರಣವಾಗಲಿದೆ ಎಂದು ಅಬ್ದುರ್ರಹ್ಮಾನ್ ಕುತ್ತೆತ್ತೂರು ಹೇಳಿದರು.

beary_sahithy_book_4 beary_sahithy_book_5

ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು.ಅಕಾಡಮಿಯ ಸದಸ್ಯ ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು.

beary_sahithy_book_12 beary_sahithy_book_11 beary_sahithy_book_10

ಸದಸ್ಯ ಶರೀಫ್ ನಿರ್ಮುಂಜೆ ಸ್ವಾಗತಿಸಿದರು. ಮಾಜಿ ಸದಸ್ಯ ಖಾಲಿದ್ ಉಜಿರೆ ಬ್ಯಾರಿ ಗೀತೆಗಳನ್ನು ಹಾಡಿದರು. ಸದಸ್ಯೆ ಆಯಿಶಾ ಪೆರ್ಲ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

Comments are closed.