ಕರಾವಳಿ

ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಕಚೇರಿ ‌ಉದ್ಘಾಟನೆ / ಸಮತಾ ಭಜನಾ ಹಾಡುಗಳ ಪುಸ್ತಕ ಬಿಡುಗಡೆ

Pinterest LinkedIn Tumblr

kasapa_offc_open

ಮಂಗಳೂರು: ಜನವರಿ 27, 28, 29ರಂದು ನಡೆಯುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿಯನ್ನು‌ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ‌ ಅವರು ಭಾನುವಾರ‌ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ‌ ಆವರಣದಲ್ಲಿ ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಸ್ವಚ್ಛ ಭಾಷೆ, ಸ್ವಚ್ಛ ಜೀವನ, ಸ್ವಚ್ಛ ಭಾರತ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆಯಾಗಿದೆ ‌ಎಂದು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಡಾ. ಬಿ. ಯಶೋವರ್ಮ, ಸಮ್ಮೇಳನದ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್, ಎಂ.ಬಿ. ಪುರಾಣಿಕ್, ಜನಾರ್ದನ ಹಂದೆ, ವೆಂಕಟ್ರಾಯ‌ ಅಡೂರು, ವೆಂಕಟ ರಮಣ ಹೆಬ್ಬಾರ್, ಸಂಪತ್ ಸುವರ್ಣ, ಶ್ರೀಧರ ಕೆ.,ಇಚ್ಚಿಲ ಸುಂದರ ಗೌಡ, ಯದುಪತಿಗೌಡ, ಯು.ಸಿ. ಪೌಲೋಸ್, ಶರತ ಕೃಷ್ಣ, ಬಾಲಭಾಸ್ಕರ್ ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್ ಸಮಾಲೋಚನ ಸಭೆಯ ವರದಿ ಮಂಡಿಸಿದರು. ಪರಿಷತ್‌ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಅಶ್ರಫ್‌ ಆಲಿ ಕುಂಞ ನಿರ್ವಹಿಸಿದರು. ಕೇಶವ ಬೆಳಾಲು ವಂದಿಸಿದರು.
—-
ಭಜನಾ ಸಾಹಿತ್ಯ ಸಾರ್ವಕಾಲಿಕ ಸಂಸ್ಕೃತಿಗೆ ಪೂರಕ – ಕಲ್ಕೂರ

samata_book_relesce

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ ವತಿಯಿಂದ ಕಲ್ಕೂರ ಪ್ರಕಾಶನವು ಸಮತಾ ಭಜನಾ ಹಾಡುಗಳು ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಆ ಸಂದರ್ಭ ಪ್ರಕಾಶನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಸಮತಾ ಅಧ್ಯಕ್ಷೆ ರಾಜಶ್ರೀ ಆಚಾರ್ಯ, ಶ್ರೀಮತಿ ಶೋಭಾ ಆರೂರು, ಶ್ರೀಮತಿ ಶೋಭಾ ರವೀಂದ್ರ, ಡಾ. ಲೀಲಾ ಉಪಾಧ್ಯಾಯ, ಶ್ರೀಮತಿ ಸಾವಿತ್ರಿ, ಶ್ರೀ ನಿತ್ಯಾನಂದ ಕಾರಂತ ಪೊಳಲಿ, ಜನಾರ್ದನ ಹಂದೆ, ಶ್ರೀಮತಿ ಶುಭ ಜಯರಾಮ್ ಭಟ್, ಶೀಲಾ, ಶ್ರೀಮತಿ ಶೋಭ ಪೇಜಾವರ, ಆರೂರು ಲಕ್ಷ್ಮೀ ರಾವ್, ಸಮತಾ ಬಳಗದ ಸದಸ್ಯೆಯರು ಉಪಸ್ಥಿತರಿದ್ದರು.

ಹಲವಾರು ಭಜನಾ ಮಂಡಳಿಯವರಿಂದ ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು

Comments are closed.