ಕರಾವಳಿ

ಹಳೆ ನೋಟು ಬದಲಾಯಿಸುವ ನೆಪದಲ್ಲಿ ದರೋಡೆಗೆ ಸಂಚು : ಆರು ಮಂದಿ ಅಂದರ್ – ಇಬ್ಬರು ಪರಾರಿ

Pinterest LinkedIn Tumblr

arrest_crime_news

ಮೂಡುಬಿದಿರೆ, ಡಿ.18: ಪ್ರಧಾನ ಮಂತ್ರಿ ನೀಶೇಧ ಹೇರಿರುವ ಹಳೆ ನೋಟುಗಳನ್ನು ( ಕಪ್ಪುಹಣ) ಹೋಸ ನೋಟುಗಳಿಗೆ ಬದಲಾಯಿಸಿ ಕೊಡುವುದಾಗಿ ಹೇಳಿ ಕರೆದು ಬಳಿಕ ದರೋಡೆಗೆ ಸಂಚು ರೂಪಿಸಿದ್ದ ಆರು ಮಂದಿ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ಬಳಿ ಬಂಧಿಸಿದ್ದಾರೆ.

ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ಬಳಿ ಆರೋಪಿಗಳು ಹಣ ಬದಲಿಸುವ ನೆಪದಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಸ್ಕಾರ್ಪಿಯೋ ಕಾರು, ಮೊಬೈಲ್ ಫೋನ್‌ಗಳು ಹಾಗೂ ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಉಪನಿರೀಕ್ಷಕ ದೇಜಪ್ಪ ಮತ್ತು ಸಿಬ್ಬಂದಿ ಠಾಣಾ ಸರಹದ್ದು ಸ್ಥಳ ಅಲಂಗಾರು ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಸ್ಕಾರ್ಪಿಯೊ ವಾಹನದಲ್ಲಿರುವ ಅಪರಿಚತರು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಎನ್ನುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ ಎನ್ನಲಾಗಿದೆ.

ಮಾಹಿತಿಯನ್ನು ಆಧರಿಸಿ ಬೆಳುವಾಯಿ ಸಮೀಪದ ಕರಿಯನಂಗಡಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಸ್ಕಾರ್ಪಿಯೋ ವಾಹನವನ್ನು ಅಡ್ಡಗಟ್ಟಿದ್ದಾಗ ಆರೋಪಿಗಳು ಪರಾರಿಯಾಲು ಯತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಇಬ್ಬರು ಆರೋಪಿಗಳು ಓಡಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಕಾರ್ಪಿಯೋ ವಾಹನವನ್ನು ಪರಿಶೀಲಿಸಿದಾಗ ಸೀಟಿನ ಅಡಿಭಾಗದಲ್ಲಿ ಆರು ಕಬ್ಬಿಣದ ಸರಳುಗಳು ಹಾಗೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಶಿವಮೊಗ್ಗದ ಸುನೀಲ್ ಹಾಗೂ ಮಹಿಳೆಯೊಬ್ಬರಲ್ಲಿದ್ದ ಹಳೆಯ 500 ಮತ್ತು 1000ರೂ. ನೋಟುಗಳನ್ನು ತೆಗೆದುಕೊಂಡು ಬರಲು ಹೇಳಿದ್ದೇವೆ. ಅವರಿಗೆ ನಿರ್ಜನ ಪ್ರದೇಶಕ್ಕೆ ಬರಲು ಸೂಚಿಸಿದ್ದು, ಬಳಿಕ ದರೋಡೆಗೆ ಯತ್ನಿಸುವುದಾಗಿತ್ತು. ಇದಕ್ಕೆ ಪ್ರತಿರೋಧಿಸಿದಾಗ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ದೋಚಲು ಸಂಚು ರೂಪಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ

Comments are closed.