ಕಾಸರಗೋಡು / ಬಾಯರ್: ಪ್ರವಾದಿ ಜನ್ಮ ದಿನಾಚರಣೆ ಅನಿಸ್ಲಾಮಿಕ ಎಂದು ಹೇಳುವ ನೂತನವಾದಿಗಳಿಂದ ದೂರವಿರಿ ಎಂದು ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯಾದ ಅಧಕ್ಷ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಬಾಯಾರ್ ತಂಙಳ್ ಕರೆ ನೀಡಿದರು.
ಅವರು ಬಾಯಾರ್ ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯಾದಲ್ಲಿ ನಡೆದ ಸ್ವಲಾತ್ ಮಜ್ಲಿಸ್ ನೇತೃತ್ವವಹಿಸಿ ಮಾತನಾಡಿದರು.ಪ್ರವಾದಿ ಜನ್ಮ ದಿನಾಚರಣೆಗೆ ಇತಿಹಾಸವಿದ್ದು ನೂತನವಾದಿಗಳು ಬೇರೆ ಬೇರೆ ರೀತಿಯಲ್ಲಿ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದು ಮುಸ್ಲಿಂ ಸಮುದಾಯ ಎಚ್ಚರ ವಹಿಸಬೇಕು ಎಂದು ಹೇಳಿದರು.
ಅಲ್-ಮದೀನಾ ಮಂಜನಾಡಿಯ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯರ್, ದಾರುಲ್ ಅಶ್-ಅರಿಯ್ಯಾ ಸುರಿಬೈಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಾಲೆಮಂಡ ಮುಹಮ್ಮದ್ ಫೈಝಿ, ಎಸ್ಸೆಸ್ಸೆಫ್ ಮುಖಂಡ ಅಶ್ರಫ್ ಸಅದಿ ಮಲ್ಲೂರು, ಸುನ್ನೀ ಫೈಝಿ ಉಸ್ತಾದ್, ಬಿ.ಎಸ್ ಮುಸ್ಲಿಯಾರ್, ಮಜೀದ್ ಹಾಜಿ ಉಚ್ಚಿಲ, ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಪೋಯ್ಯತ್ತಬೈಲ್ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ವಂದಿಸಿದರು.
Comments are closed.