ಪುತ್ತೂರು, ಡಿಸೆಂಬರ್.15 : ಕುಮಾರಾಧಾರ ನದಿಯಲ್ಲಿ ದೋಣಿ ಮಗುಚಿ ಬಿದ್ದು ಇಬ್ಬರು ಸಾವಿಗೀಡಾದ ಘಟನೆ ಸಂಭವಿಸಿದೆ. ಬುಡೇರಿಯ ದೈವಸ್ಥಾನದ ನೇಮಕ್ಕೆ ನದಿ ದಾಟುತ್ತಿದ್ದಾಗ ಚಾರ್ವಾಕ ಗ್ರಾಮದ ಗುಜ್ಜರ್ಮೆ ಬಳಿಯ ಕುಮಾರಧಾರ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ ಇಬ್ಬರು ನೀರುಪಾಲಾಗಿದ್ದಾರೆ.
ನೀರುಪಾಲಾದವರನ್ನು ರಾಮಕುಂಜ ನಿವಾಸಿ ಕಿಂಞಂಣ್ಣ ಗೌಡ (60 ಹಾಗೂ ಚೊಕ್ಕಾಡಿಯ ಗಣೇಶ್ (63) ಎಂದು ಗುರುತಿಸಲಾಗಿದೆ. ನೀರುಪಾಲಾದವರಿಗಾಗಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.ಇದೇ ಸಂದರ್ಭ ದೋಣಿಯನ್ನು ಚಲಾಯಿಸುತ್ತಿದ್ದ ಗುಜ್ಜರಮೆ ನಿವಾಸಿ ನಾರಾಯಣ ಎಂಬವರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಸ್ಥಳಕ್ಕೆ ಆಗಮಿಸಿದು, ನುರಿತ ಈಜುಗಾರರ ತಂಡದೊಂದಿಗೆ ನೀರುಪಾಲಾದವರ ಹುಡುಕಾಟದಲ್ಲಿ ತೊಡಗಿದ್ದಾರೆ.