ಮಂಗಳೂರು, ಡಿಸೆಂಬರ್. 6: ಕರಾವಳಿ ಜಿಲ್ಲೆಯ ಇತಿಹಾಸ ಪ್ರಸಿದ್ದ ನಾಗಾರಾಧನೆಯ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಸೋಮವಾರ ಬ್ರಹ್ಮರಥೋತ್ಸವ ಜರಗಿತು. ಬಾನುವಾರ ಪಂಚಮಿ ಉತ್ಸವ ಬಹಳ ವಿಜೃಂಭಣೆಯಿಂದ ವಿಧಿವತ್ತಾಗಿ ಜರುಗಿತು. ಸೋಮವಾರ ವೈಭವದ ಷಷ್ಠಿ ಬ್ರಹ್ಮರಥೋತ್ಸವದೊಂದಿಗೆ ಷಷ್ಠಿ ಮಹೋತ್ಸವ ಸಮಾಪನಗೊಂಡಿತ್ತು.
ಶ್ರೀ ದೇವರಿಗೆ ಉಷ:ಕಾಲ ಪೂಜೆ, ವಿಶೇಷ ನವಕ ಕಲಾಶಾಭಿಷೇಕ, ಪಂಚಾಮೃತ ಅಭಿಷೇಕ ವಿವಿಧ ಆರ್ಚನೆಗಳೊಂದಿಗೆ ನೆರವೇರಿತು. ಮಧ್ಯಾಹ್ನ ಒಂದು ಗಂಟೆಗೆ ಬಲಿ ಹೊರಟು ರಥಾರೋಹಣ, ಬ್ರಹ್ಮರಥೋತ್ಸವ ಜರಗಿತು. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು.
Comments are closed.