ಕರಾವಳಿ

ಜಾತಿ, ಮತ, ಬೇಧ, ರಾಜಕೀಯ ರಹಿತ ಸಂಘಟನೆ ರೋಟರಿ ಸಂಸ್ಥೆ : ರಾಜ್‌ಗೋಪಾಲ್ ರೈ

Pinterest LinkedIn Tumblr

raj_gopal_rai

ಮಂಗಳೂರು : ರೋಟರಿ 3181 ಜಿಲ್ಲಾ ಕ್ರೀಡೋತ್ಸವ ಬಾಂಧವ್ಯ, ಎರಡು ದಿನಗಳ ಕಾಲ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.ಕ್ರೀಡೋತ್ಸವವನ್ನು ಸ್ಪೋರ್ಟ್ಸ್ ಪ್ರಮೋಟರ್‍ಸ್ ಅಧ್ಯಕ್ಷರಾದ ಎಂ.ಸದಾನಂದ ಶೆಟ್ಟಿ ಅವರು ಧ್ವಜಾರೋಹಣ ಮಾಡಿ, ರೋಟರಿ ಜಿಲ್ಲಾಧ್ಯಕ್ಷ ಡಾ| ಆರ್.ಎಸ್. ನಾಗಾರ್ಜುನ ದೀಪ ಬೆಳಗಿಸಿ ಉದ್ಫಾಟಿಸಿದರು.

ನಂತರ ನಡೆದ ಸಮಾರೋಪದಲ್ಲಿ ಸರ್ವಾಂಗೀಣ ಪ್ರಶಸ್ತಿಯನ್ನು ವಿತರಿಸಿದ ಕ್ರೀಡೊತ್ಸವದ ಜಿಲ್ಲಾ ಚೇರ್‌ಮ್ಯಾನ್ ರೊಟೇರಿಯನ್ ರಾಜ್‌ಗೋಪಾಲ್ ರೈ, ಮಾತನಾಡಿ, ಜಾತಿ, ಮತ, ರಾಜಕೀಯ ಬೇಧ ಇಲ್ಲದ ಅಂತರ್‌ರಾಷ್ಟ್ರೀಯ ಮಟ್ಟದ ಸಂಘಟನೆ ಇದ್ದರೆ ಅದು ರೋಟರಿ ಆಗಿದೆ.

ನೂರನೆ ವರ್ಷದ ಸಂಭ್ರಮದಲ್ಲಿ ಇರುವ ಈ ಶುಭ ಸಂದರ್ಭದಲ್ಲಿ ಕ್ರೀಡೋತ್ಸವ ಮಂಗಳೂರಿನಲ್ಲಿ ನಡೆಸಲು ಸದಾವಕಾಶ ಸಿಕ್ಕಿದ್ದು, ನಮ್ಮ ಸುಯೋಗವಾಗಿದೆ. ಕ್ರೀಡಾಕೂಟದಲ್ಲಿ ರೋಟರಿ ಸದಸ್ಯರು ಮತ್ತು ಅವರ 7 ವರುಷದ ಮಕ್ಕಳಿಂದ ಹಿಡಿದು, ಇಡೀ ಕುಟುಂಬ ಭಾಗವಹಿಸಿ, ಸಂಭ್ರಮಪಟ್ಟು ಬಾಂಧವ್ಯದ ಕ್ರೀಡಾ ಸ್ಪೂರ್ತಿಯನ್ನು ಮೆರೆದುದು ಎಲ್ಲರಿಗೂ ಒಂದು ಮಾದರಿಯಾಗಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಉಪರಾಜ್ಯಪಾಲ ರೊಟೇರಿಯನ್ ಅಶ್ವಿನಿ ಕುಮಾರ್ ರೈ ಬಂಟ್ವಾಳ, ಮಾತನಾಡಿ, ಈ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಮಂಗಳೂರಿನ ರೊಟೇರಿಯನ್‌ಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕ್ರೀಡಾಕೂಟ ಯಶಸ್ವಿಯಾಗಲು ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

ಪೂರ್ವ ಜಿಲ್ಲಾಧ್ಯಕ್ಷ ಡಾ| ದೇವದಾಸ್ ರೈ, ಈ ಸಂದರ್ಭದಲ್ಲಿ ಹಾಜರಿದ್ದು, ಮಾರ್ಗದರ್ಶನವನ್ನು ನೀಡಿದರು.ವಲಯ 2 ಹಾಗೂ 3ರ ಉಪರಾಜ್ಯಪಾಲರಾದ ರೊಟೇರಿಯನ್ ವಿನಾಯಕ್ ಪ್ರಭು, ವಿಕ್ರಮ್ ದತ್ತ, ಇವರುಗಳು ರೋಟರಿ ಬಾವುಟವನ್ನು ಅನಾವರಣ ಮಾಡಿ ರಾಷ್ಟ್ರಗೀತೆ ಹಾಡಿ ಕ್ರೀಡಾಕೂಟವನ್ನು ಸಮಾಪ್ತಿಗೊಳಿಸಿದರು.

ಸಮಾರೋಪ ಸಮಾರಂಭದಲ್ಲಿ ಶ್ರೀಯುತರಾದ ಮಂಜುನಾಥ ರೇವಣಕರ, ಡಾ| ನಂದಕಿಶೋರ್ ರಾವ್, ಕೆ.ಎಂ.ಹೆಗ್ಡೆ, ಸಂತೋಷ್ ಶೇಟ್, ವಿನ್ಸೆಂಟ್ ಡಿಸೋಜ, ಆನಂದ್ ಡಿಸೋಜಾ, ರಾಜೇಶ್ ಶೆಟ್ಟಿ ಲೀಡ್ಸ್, ರಾಮ್‌ಶೇಶ ಶೆಟ್ಟಿ, ಜೋಯೆಲ್ ಲೋಬೋ, ಜಗನ್ನಾಥ ಶೆಟ್ಟಿ, ನಾರ್ಬರ್ಟ್ ಡಿಕೋಸ್ತಾ, ಡಾ| ಸ್ಮೀತಾ, ಪೂರ್ಣಿಮಾ ರೈ, ಶಾಮ್‌ಪ್ರಸಾದ್ ಹೆಗ್ಡೆ, ನೀಲಂ ಜಲನ್, ಪ್ರಮೀಳಾ ಹೆಗ್ಡೆ, ಆರತಿ ಶೇಟ್, ರಿಯಾನಾ ಡಿಕುನಾ, ಹೇಮಾ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್, ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಅನಿಲ್ ಗೋನ್ಸಾಲ್ವೆಸ್ ವಹಿಸಿದ್ದರು.

ಕಾರ್ಯದರ್ಶಿ, ರೇಮಂಡ್ ಡಿಕುನಾ ವಂದಿಸಿದರು. ರವಿ ಜಲನ್ ನಿರೂಪಿಸಿದರು. ಖಜಾಂಚಿ ಪ್ರಸಾದ್ ಶೆಟ್ಟಿ ಸಂಯೋಜಿಸಿದರು. ಕ್ರೀಡಾ ಸಂಯೋಜಕರಾದ ಅನಿಲ್ ರಾವ್ ಮತ್ತು ಗೋಪಾಲ್ ಶೆಟ್ಟಿ ಕ್ರೀಡೋತ್ಸವದ ಸಂಯೋಜನೆಗೆ ಸಹಕರಿಸಿದರು.

Comments are closed.