ಕರಾವಳಿ

ಕುಂದಾಪುರದಲ್ಲಿ ನಡೆಯುತ್ತಿದ್ದ ಯುಜಿಡಿ ಕಾಮಗಾರಿ ವೇಳೆ ಕಾರ್ಮಿಕ ದಾರುಣ ಬಲಿ

Pinterest LinkedIn Tumblr

ಕುಂದಾಪುರ: ಕುಂದಾಪುರದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಯುಜಿಡಿ ಕಾಮಗಾರಿ ಸಂದರ್ಭ ಕಾರ್ಮಿಕನೋರ್ವ ದಾರುಣವಾಗಿ ಬಲಿಯಾದ ಘಟನೆ ಭಾನುವಾರ ನಡೆದಿದೆ. ಬಿಹಾರ ಮೂಲದ ರೂಪೇಶ್ ಪಾಸ್ವಾನ್ (21) ಸಾವಿಗೀಡಾದ ಯುವಕ.

kundapura_youth-death_ugd-work-7 kundapura_youth-death_ugd-work-5 kundapura_youth-death_ugd-work-3 kundapura_youth-death_ugd-work-6 kundapura_youth-death_ugd-work-2 kundapura_youth-death_ugd-work-4 kundapura_youth-death_ugd-work-1

ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಕೆಲವು ತಿಂಗಳುಗಳಿಂದ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು ಕುಂದಾಪುರದ ನಾನಾಸಾಹೇಬ್ ರಸ್ತೆಯ ವ್ಯಾಸರಾಯ ಕಲ್ಯಾಣಮಂಟಪ ಹಿಂಭಾಗದ ಡಾಮರು ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ಕಾಮಗಾರಿ ನಡೆಯುತ್ತಿತ್ತು. ರಸ್ತೆಯ ಮಧ್ಯೆ ಎರಡೂವರೆ ಅಡಿ ಅಗಲ 7 ಅಡಿ ಅಗಲ ಆಳಕ್ಕೆ ಜೇಸಿಬಿಯಲ್ಲಿ ಹೊಂಡ ತೆಗೆಯಲಾಗಿದ್ದು ಅದರೊಳಗೆ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅದೇ ರಸ್ತೆಯಲ್ಲಿ ಜೇಸಿಬಿ ಕೆಲಸ ಮಾಡುತ್ತಿದ್ದ ಕಾರಣ ಅದರ ಭಾರದ ಒತ್ತಡಕ್ಕೆ ಸಡಿಲವಾದ ಮಣ್ಣು ಕುಸಿದು ಕಾರ್ಮಿಕ ರೂಪೇಶ್ ಮೇಲೆ ಬಿದ್ದಿದೆ. ಈ ವೇಳೆ ಜೇಸಿಬಿ ಚಲಾಯಿಸುತ್ತಿದ್ದ ಆಪರೇಟರ್ ಕೂಡ ಅಲ್ಲಿಂದ ಪರಾರಿಯಾಗಿದ್ದು ಸ್ಥಳೀಯರು ರೂಪೇಶನನ್ನು ಬಚವ್ ಮಾಡಲು ಹರಸಾಹಸಪಟ್ಟು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ಕೂಡ ಅಷ್ಟೋತ್ತಿಗಾಗಲೇ ಆತ ಸಾವನ್ನಪ್ಪಿದ್ದ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.