ಕರಾವಳಿ

ಮಿಸ್‌ ಸೂಪ್ರಾನ್ಯಾಷನಲ್‌ ಅಂತರರಾಷ್ಟ್ರೀಯ ಕಿರೀಟ ಮುಡಿಗೇರಿಸಿಕೊಂಡ ದ.ಕ.ಜಿಲ್ಲೆಯ ಚೆಲುವೆ ಶ್ರೀನಿಧಿ

Pinterest LinkedIn Tumblr

shri_nidhi_shetty_1


ಮ೦ಗಳೂರು, ಡಿಸಂಬರ್. 3:  ಡಿಸಂಬರ್ 2 ರಂದು ಪೋಲ್ಯಾಂಡ್ನ‌ಲ್ಲಿ ನಡೆದ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಮಿಸ್‌ ಸೂಪ್ರಾ ನ್ಯಾಷನಲ್‌ ಸ್ಪರ್ಧೆಯಲ್ಲಿ ಮೂಲ್ಕಿಯ ಚೆಲುವೆ ಶ್ರೀನಿಧಿ ರಮೇಶ್‌ ಶೆಟ್ಟಿ ಅವರು ನೂರಾರು ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಿಸ್‌ ಸೂಪ್ರಾ ನ್ಯಾಷನಲ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

shri_nidhi_shetty_2 shri_nidhi_shetty_3

ಹಿಂದಿನ ವರ್ಷದ ಮಿಸ್‌ ಸೂಪ್ರಾ ನ್ಯಾಷನಲ್‌ ಕಿರೀಟಕ್ಕೆ ಭಾಜನರಾಗಿದ್ದ ಸ್ಟೆಫಾನಿ ಸ್ಟೆಗನ್‌ ಅವರು ಭಾರತವನ್ನು ಪ್ರತಿನಿಧಿಸಿ ಈ ಬಾರಿಯ ಸೂಪ್ರಾ ನ್ಯಾಷನಲ್‌ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿಧಿ ಅವರಿಗೆ ಕೀರಿಟ ತೋಡಿಸಿದರು. ಶ್ರೀನಿಧಿ ಅವರು ಈಗಾಗಲೇ ಮಿಸ್‌ ಕರ್ನಾಟಕ, ಮಿಸ್‌ ಬ್ಯೂಟಿಫ‌ುಲ್‌ ಸ್ಮೈಲ್ , ಮಣಪ್ಪುರಂ ಮಿಸ್‌ ಕ್ವೀನ್‌ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

shri_nidhi_shetty_4

ಸೂಪ್ರಾನ್ಯಾಷನಲ್‌ ಕಿರೀಟ ಮಾತ್ರವಲ್ಲದೆ ತನ್ನ ಚೆಲುವಿಕೆ, ದೇಹಸಿರಿ ಮತ್ತು ಫೋಟೋಜನಿಕ್‌ ಫೇಸ್‌ಗಾಗಿ ಮೂರು ಫ್ಯಾಷನ್‌ ಶೋ ಮತ್ತು ಮಾಡೆಲಿಂಗ್‌ ಮಾಡುತ್ತಿರುವ ಶ್ರೀನಿಧಿ ಅವರು ಈಗಾಗಲೇ ಹಲವು ರಾಷ್ಟ್ರ ಮಟ್ಟದ ಸೌಂದರ್ಯ ಸ್ಫರ್ಧೆಗಳಲ್ಲಿ ಗಮನ ಸೆಳೆದಿದ್ದಾರೆ.

 

Comments are closed.