ಕರಾವಳಿ

ಬಂಗುಡೆ ಮೀನು ತುಂಬಿದ ಮಿನಿ ಲಾರಿ ಪಲ್ಟಿ; ಅದೃಷ್ಟವಶಾತ್ ಚಾಲಕ ಪಾರು

Pinterest LinkedIn Tumblr

ಕುಂದಾಪುರ: ಮಲ್ಪೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಬಂಗುಡೆ ಮೀನು ತುಂಬಿದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕುಂದಾಪುರದ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

kundapura_fish-lorry_pulty-3 kundapura_fish-lorry_pulty-2 kundapura_fish-lorry_pulty-9 kundapura_fish-lorry_pulty-5 kundapura_fish-lorry_pulty-4 kundapura_fish-lorry_pulty-1 kundapura_fish-lorry_pulty-6 kundapura_fish-lorry_pulty-7 kundapura_fish-lorry_pulty-8 kundapura_fish-lorry_pulty-10

ತೆಕ್ಕಟ್ಟೆ ಡಿವೈಡರ್ ಸಮೀಪ ಆಟೋ ರಿಕ್ಷವೊಂದು ರಸ್ತೆ ದಾಟುತ್ತಿದ್ದ ವೇಳೆ ಉಡುಪಿಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಲಾರಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದು ಡಿವೈಡರ್ ಏರೊದ ಲಾರಿ ಪಲ್ಟಿಯಾಗಿದೆ. ಇದರಿಂದಾಗಿ ಲಾರಿಯ ಒಳಗಿನ ಬಾಕ್ಸುಗಳಲ್ಲಿದ್ದ ಮೀನುಗಳು ರಸ್ತೆಯ ಮೇಲೆ ಚೆಲ್ಲಲ್ಪಟ್ಟಿದ್ದು ಸಾರ್ವಜನಿಕರ ಸಹಕಾರದಲ್ಲಿ ಅದನ್ನು ಇನ್ನೊಂದು ವಾಹನಕ್ಕೆ ಲೋಡ್ ಮಾಡಲಾಗಿದೆ. ಲಾರಿಯ ಒಳಗಿದ್ದ ಚಾಲಕ ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.