ಕರಾವಳಿ

ಕುಂದಾಪುರದಲ್ಲಿ ತಾಜಾ ಹೂವಿನಿಂದ ಸಿದ್ದಗೊಂಡ ಗಣಪ..!

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮ ಇಂದು ನೆರವೇರಲಿದ್ದು ಈ ನಿಮಿತ್ತ ಕುಂದೇಶ್ವರ ಫ್ರೆಂಡ್ಸ್ ಅವರು ದೇವಸ್ಥಾನದ ನಾಗಬನದ ಸಮೀಪ ನಿರ್ಮಿಸಿದ ಹೂವಿನ ಗಣಪತಿ ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ.

kundapura_flower_ganapa-4 kundapura_flower_ganapa-3 kundapura_flower_ganapa-1 kundapura_flower_ganapa-2

ಕುಂದೇಶ್ವರ ದೀಪೋತ್ಸವದಂದು ಆಗಮಿಸುವ ಭಕ್ತರ ವೀಕ್ಷಣೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕುಂದೇಶ್ವರ ಫ್ರೆಂಡ್ಸ್ ಸದಸ್ಯರು ಹೂವಿನಿಂದ ನಿರ್ಮಿಸಿದ ಗಣಪತಿಯ ಕಲಾಕ್ರತಿಯನ್ನು ರಚಿಸಿದ್ದು ಮುಂಬೈಯ ‘ಲಾಲ್ ಬಾಗ್ ಚಾ ರಾಜಾ; ಗಣಪತಿ ಮಾದರಿ ಇದಾಗಿದೆ. ಗುಲಾಬಿ, ಒರ್ಕೇಡಿಯಾ, ಜರ್ಬಾರ್ ಹೈಬ್ರೀಡ್, ಆಸ್ಪರೇಗಸ್, ನೀಲಿ ಡೈಸಿ, ಬಿಳಿ ಡೈಸಿ, ಹಳದಿ ಡೈಸಿ, ಕಲ್ಕತ್ತಾ ಇಶಾಂತಿಮಾಮ್, ಪಾಮ್ ಲೀವ್ಸ್, ಓಯಸಿಸ್ ಫ್ಲೋರಲ್ ಮೊದಲಾದ 10 ಬಗೆಯ 150  ಕೇಜಿ ತಾಜಾ ಹೂಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು ೮೦ ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದಲಾದ ಈ ಪುಷ್ಪಾಲಂಕಾರವು ಕುಂದೇಶ್ವರ ಫ್ರೆಂಡ್ಸ್ ಸದಸ್ಯರ ಸತತ ಪರಿಶ್ರಮದಿಂದ ನಿರ್ಮಾಣವಾಗಿದೆ.

Comments are closed.