ಕುಂದಾಪುರ: ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ವಿಪಕ್ಷಗಳು ಇಂದು ಭಾರತ್ ಬಂದ್ ಕರೆ ನೀಡಿದ್ದರು. ಆದರೇ ಕುಂದಾಪುರದಲ್ಲಿ ಮಾತ್ರ ಯಾವುದೇ ಬಂದ್ ಆಚರಣೆ ಇರಲಿಲ್ಲ, ನಿತ್ಯದಂತೆ ಕಾರ್ಯಚಟುವಟಿಕೆಗಳು ನಿರಾತಂಕವಾಗಿ ನಡೆದವು.

ಸೋಮವಾರ ಬೆಳಿಗ್ಗೆನಿಂದಲೇ ಮಾಮೂಲಿಯಂತೆ ಖಾಸಗಿ ಹಾಗೂ ಸರಕಾರಿ ಬಸ್ಸು ಸಂಚಾರ ಆರಂಭವಾಗಿದ್ದು, ಆಟೋ ರಿಕ್ಷಾ, ಟ್ಯಾಕ್ಸಿಗಳು ಬೀದಿಗಿಳಿದಿದ್ದವು. ಶಾಲಾ-ಕಾಲೇಜುಗಳು, ಬ್ಯಾಂಕ್, ಕಛೇರಿಗಳು ಎಂದಿನಂತೆ ತೆರದಿದ್ದು ಹೂವಿನ ಮಾರುಕಟ್ಟೆ ಸಮೇತ, ವಿವಿಧ ಅಂಗಡಿ ಮುಂಗಟ್ಟುಗಳು ಕೂಡ ತೆರೆದಿತ್ತು. ಗ್ರಾಮೀಣ ಭಾಗಲ್ಲಿಯೂ ಕೂಡ ಬಂದ್ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಿತ್ಯದ ವ್ಯವಹಾರಗಳು ಸಾಂಗವಾಗಿ ನಡೆದವು. ಇನ್ನು ಕುಂದಾಪುರದ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದಲ್ಲಿ ಇಂದು ದೀಪೋತ್ಸವ ಸಂಭ್ರಮವಾದ ಕಾರಣ ಜನಜಂಗುಳಿ ಹಾಗೂ ವಾಹನದಟ್ಟಣೆ ಅಧಿಕವಾಗಿತ್ತು. ವರ್ಷಕ್ಕೆ ನಾಲ್ಕಾರು ಬಂದ್ ನಡೆಸಿದರೇ ಜೀವನ ಮಾಡುವುದು ಹೇಗೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾದವು.
Comments are closed.