ಕರಾವಳಿ

ಮನೆಗೆ ನುಗ್ಗಿ ಹಲ್ಲೆ,ದರೋಡೆ : ನಾಲ್ವರು ಆರೋಪಿಗಳ ಸೆರೆ – ಬಂಧಿತರಿಂದ 40 ಲಕ್ಷ ರೂ. ಮೌಲ್ಯದ ಸೊತ್ತು ವಶ

Pinterest LinkedIn Tumblr

madikeri_robars-arest

ಮಡಿಕೇರಿ, ನ.26: ಕುಶಾಲನಗರ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಕುಶಾಲನಗರ ಹೊಸ ಪಟ್ಟಣ ಗ್ರಾಮದ ನಿವಾಸಿ ಶಿವಕುಮಾರ್ ಎಂಬವರ ಮನೆಗೆ ನುಗ್ಗಿ ಹಲ್ಲೆ ನಡೆಸಿ ನಗ-ನಗದು ದೋಚಿದ್ದ ತಂಡದ ನಾಲ್ವರನ್ನು ಬಂಧಿಸಿದ್ದಾರೆ.

ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ರಾಜೇಂದ್ರ ಪ್ರಸಾದ್ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸಹಿತಾ ಐವರು ತಲೆಮರೆಸಿಕೊಂಡಿದ್ದಾರೆ.

ಬಂಧಿತರನ್ನು ಮೂಲತಃ ದ.ಕ. ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಅಬುರ್ರಹ್ಮಾಮಾನ್(24), ಮಂಗಳೂರಿನ ಉಳ್ಳಾಲ ನಿವಾಸಿ ಮುಹಮ್ಮದ್ ಹನೀಫ್(28), ಮುಹಮ್ಮದ್ ಫೂಝ್(28), ಜಾಫರ್ ಸಾದಿಕ್(25) ಎಂದು ಗುರು ತಿಸಲಾಗಿದೆ.

ಪ್ರಮುಖ ಆರೋಪಿ ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಆಟೊ ಚಾಲಕ ಕೃಷ್ಣ , ನಿಝಾಮ್, ಮಜೀದ್, ಸಲಿಯಾತ್, ಜಲಾಲ್ ಎಂಬವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಮಂಗಳೂರಿನ ಉಳ್ಳಾಲ ನಿವಾಸಿ ಮುಹಮ್ಮದ್ ಹನೀಫ್ ಮೇಲೆ ಉಳ್ಳಾಲ ಪೋಲೀಸ್ ಠಾಣೆಯಲ್ಲಿ 19, ಮುಹಮ್ಮದ್ ಫಯಾಝ್ನ 13 ಹಾಗೂ ಜಾಫರ್ ಸಾದಿಕ್ ಎಂಬಾತನ ಮೇಲೆ ಒಂದು ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಬಂಧಿತರಿಂದ ಒಟ್ಟು 42,000 ನಗದು, 1 ನೆಕ್ಲೇಸ್, 4 ಚಿನ್ನದಉಂಗುರ, 2 ಚಿನ್ನದ ಸರ, ಒಂದು ಚಿನ್ನದ ಕರಿಮಣಿ ಪದಕ, 2 ಚಿನ್ನದ ಬಳೆ, 1 ಪಿಸ್ತೂಲು, ವಜ್ರ, ಬೆಳ್ಳಿನಾಣ್ಯ, ಚಿನ್ನದನಾಣ್ಯ, ಸಿಗಾರ್ ಲೈಟ್, ಪರ್ಫ್ಯೂಮ್ ಬಾಟಲ್ ಸೇರಿದಂತೆ ಅಂದಾಜು 40 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಸೋಮವಾರ ಪೇಟೆ ವಲಯ ಡಿವೈಎಸ್ಪಿ ಸಂಪತ್ ಕುಮಾರ್, ಅಪರಾಧ ಪತ್ತೆ ದಳ ವಿಭಾಗದ ಇನ್ಸ್ಪೆಕ್ಟರ್ ಕರೀಂ,ಗುಪ್ತ ದಳ ವಿಭಾಗದ ಇನ್ಸ್ಪೆಕ್ಟರ್ ಮಹೇಶ್, ಕುಶಾಲನಗರ ವೃತ್ತನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪಠಾಣಾಧಿಕಾರಿ ಅನೂಪ್ ಮಾದಪ್ಪ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್, ಕುಶಾಲನಗರದ ಸಹಾ ಯಕ ಠಾಣಾಧಿಕಾರಿ ಸ್ವಾಮಿ, ಉದಯ, ಲೋಕೇಶ್, ಸಂಪತ್, ಮೋಹನ್, ಜಯಪ್ರಕಾಶ್, ಮಂಜುನಾಥ್, ಲೋಕೇಶ್, ಸುರೇಶ್, ನಾಗರಾಜ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Comments are closed.