ಕರಾವಳಿ

ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳವು ಪ್ರಕರಣ : ಉಂಗುರ ಸಹಿತ ಆರೋಪಿ ಸೆರೆ

Pinterest LinkedIn Tumblr

dimond_robary-accsed

ಮಂಗಳೂರು, ನ.25: ಕದ್ರಿ ಸಮೀಪದ ಮನೆಯೊಂದರಲ್ಲಿ ಇತ್ತೀಚಿಗೆ ನಡೆದ ಕಳವು ಪ್ರಕರಣವನ್ನು ಬೇಧಿಸಿರುವ ಕದ್ರಿ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಯೂನುಸ್ ಅಹ್ಮದ್ ಯಾನೆ ಲಿಯಾಖತ್ (36) ಎಂಬಾತ ಬಂಧಿತ ಆರೋಪಿ.ಬಂಧಿತ ಆರೋಪಿಯಿಂದ ಕಳವುಗೈದ 14 ಲಕ್ಷ ಮೌಲ್ಯದ ವಜ್ರದ ಉಂಗುರ ಸಹಿತ 40 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಕದ್ರಿ ಶಿವಭಾಗ್ ಬಳಿಯ ಲೋಬೋ ಲೇನ್‌ನಲ್ಲಿರುವ ಸಿರಾಜ್ ಯಾನೆ ಯೂಸುಫ್ ಎಂಬವರ ಮನೆಗೆ ನುಗ್ಗಿದ ಕಳ್ಳರು 14 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಹಾಗೂ 700 ಬ್ರಿಟಿಷ್ ಪೌಂಡ್ ಕರೆನ್ಸಿ ಕಳವುಗೈದಿದ್ದರು.

ಯೂಸುಫ್ ಅವರ ಮನೆಯಲ್ಲಿ ತಮ್ಮನ ರೂಮ್‌ನ ಲಾಕರ್‌ನಲ್ಲಿ ವಜ್ರದ ಉಂಗುರು ಇರಿಸಲಾಗಿತ್ತು. ಮದುವೆ ನಿಶ್ಚಿತಾರ್ಥ ಸಂದರ್ಭ ದೊರೆತ ವಜ್ರದ ಉಂಗುರ ಇದಾಗಿತ್ತು. ನವೆಂಬರ್ 15-20ರ ನಡುವೆ ಕಳವು ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು.

ಈ ಬಗ್ಗೆ ಸಿರಾಜ್ ಅವರು ನ.22 ರಂದು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಅವರ ನೇತೃತ್ವದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಬಲೆಗೆ ಬಿದ್ದಿದ್ದಾನೆ.

Comments are closed.