ಕ್ರೀಡೆ

ಯುವರಾಜ್ ಸಿಂಗ್ ಮದುವೆಗೆ ಹೋಗುವುದಿಲ್ಲ ಎಂದ ತಂದೆ ಯೋಗರಾಜ್ ಸಿಂಗ್ ! ಕಾರಣ ಇಲ್ಲಿದೆ ಓದಿ…

Pinterest LinkedIn Tumblr

yoga

ಚಂಡೀಗಢ: ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮದುವೆಗೆ ದಿನಗಣನೆ ಶುರವಾಗಿದ್ದು ಈ ಮಧ್ಯೆ ಮಗನ ಮದುವೆಗೆ ಹೋಗುವುದಿಲ್ಲ ಎಂದು ತಂದೆ ಯೋಗರಾಜ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ನ ಫತೇಗರ್ ಸಾಹಿಬ್ ನಲ್ಲಿರುವ ಗುರುದ್ವಾರದಲ್ಲಿ ಗೆಳತಿ ಹಜೆಲ್ ಕೀಜ್ ರನ್ನು ನವೆಂಬರ್ 30ರಂದು ಯುವರಾಜ್ ಸಿಂಗ್ ವಿವಾಹವಾಗುತ್ತಿದ್ದು ನನ್ನ ಮಗನ ಸಾಂಪ್ರದಾಯಿಕ ಮದುವೆ ಸಮಾರಂಭದಲ್ಲಿ ಭಾಗವಹಿಸದೇ ಇರುವುದು ದುರಾದೃಷ್ಟ. ಗುರುದ್ವಾರದಂಥ ಸ್ಥಳದಲ್ಲಿ ಮದುವೆ ಸಮಾರಂಭ ನಡೆದಲ್ಲಿ ನಾನು ಮದುವೆಗೆ ಆಗಮಿಸುವುದಿಲ್ಲ ಎಂದು ಯುವರಾಜ್ ತಾಯಿಗೆ ಹೇಳಿದ್ದೆ ಎಂದರು.

ನನಗೆ ದೇವರಲ್ಲಿ ಮಾತ್ರ ನಂಬಿಕೆ ಇದೆ. ಧಾರ್ಮಿಕ ಗುರುಗಳನ್ನು ನಾನು ನಂಬುವುದಿಲ್ಲ. ನವೆಂಬರ್ 29ರಂದು ಚಂಡೀಗಢದ ಲಲಿತ್ ಹೋಟಲ್ ನಲ್ಲಿ ನಡೆಯಲಿರುವ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಆ ನಂತರ ದೆಹಲಿ ಹಾಗೂ ಗೋವಾದಲ್ಲಿ ನಿಗದಿಯಾಗಿರುವ ಯಾವ ಕಾರ್ಯಕ್ರಮಕ್ಕೂ ಹೋಗುತ್ತಿಲ್ಲ ಎಂದು ಯೋಗರಾಜ್ ಹೇಳಿದ್ದಾರೆ.

Comments are closed.