ಕುಂದಾಪುರ: ಕುಂದಾಪುರ ತಾಲೂಕಿನ ಶಿರೂರು ನೀರ್ಗದ್ದೆ ಬಳಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಬಲಿಯಾದ ಘಟನೆ ತಡರಾತ್ರಿ ನಡೆದಿದೆ. ಬೈಕ್ ಸವಾರನನ್ನು ಲೋಹಿತ್ ಎಂದು ಗುರುತಿಸಲಾಗಿದೆ.
ವೇಗವಾಗಿ ಚಲಿಸಿಬಂದ ಲಾರಿಯೊಂದು ಬೈಕಿಗೆ ಡಿಕ್ಕಿಯಾಗಿದ್ದಲ್ಲದೇ ಅಪಘಾತದ ತರುವಾಯ ಲಾರಿ ಚಾಲಕ ಲಾರಿ ನಿಲ್ಲಿಸದೇ ಪರಾರಿಯಾಗಲು ಮುಂದಾಗಿದ್ದಾನೆ. ಬೈಕ್ ಈ ವೇಳೆ ಲಾರಿ ಕೆಳಭಾಗದಲ್ಲಿ ಸಿಲುಕಿದ್ದ ಕಾರಣ ಘರ್ಷಣೆಗೊಳಪಟ್ಟು ಬೆಂಕಿ ಕಾಣಿಸಿಕೊಂಡಿದ್ದಲ್ಲದೇ ಲಾರಿ ಹಾಗೂ ಬೈಕ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಳಿಕ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.