ಕರಾವಳಿ

‘ಮಂಗನ ಮಮತೆ’; ಕರುಳ ಕುಡಿಯ ಸಾವಿಗೆ ರೋಧಿಸಿದ ತಾಯಿ ಮಂಗ

Pinterest LinkedIn Tumblr

ಉಡುಪಿ: ಅಲ್ಲೊಂದು ಸಾವಿನ ಸೂತಕದ ವಾತಾವರಣ. ನೆರೆದಿರುವ ಜನ ಭಾವುಕರಾಗಿ ನೋಡುತ್ತಿದ್ದರು. ತಾಯಿ ತನ್ನ ಅಗಲಿದ ಕಂದನಿಗಾಗಿ ರೋದಿಸುತ್ತಿತ್ತು. ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡಿ ಚಡಪಡಿಸುತ್ತಿತ್ತು. ತನ್ನ ಮಗುವಿನ ಬಳಿ ಯಾರೂ ಸುಳಿಯದಂತೆ ಕಾವಲು ಹಾಕಿತ್ತು. ಇದು ತಾಯಿ ಮಂಗ ತನ್ನ ಮಗುವನ್ನು ಕಳೆದುಕೊಂಡು ರೋದಿಸಿದ ಕತೆ. ಈ ಘಟನೆ ನಡೆದಿದ್ದು ಉಡುಪಿಯ ನಗರದ ವಾದಿರಾಜ ರಸ್ತೆ ಪರಿಸರದಲ್ಲಿ. ಇಲ್ಲಿದೆ ಮಂಗನ ತಾಯಿ ಮಮತೆಯ ದುಖದ ಕತೆ.

udupi_mangana_mamathe-6 udupi_mangana_mamathe-2 udupi_mangana_mamathe-8 udupi_mangana_mamathe-7 udupi_mangana_mamathe-4 udupi_mangana_mamathe-1 udupi_mangana_mamathe-3 udupi_mangana_mamathe-9 udupi_mangana_mamathe-5

ಉಡುಪಿಯ ವಾದಿರಾಜ ರಸ್ತೆಯ ಸಮೀಪದಲ್ಲಿರುವ ಒಂದು ಕಂಪೌಂಡಿನ ಒಳ ಬಾಗದಲ್ಲಿರುವ ತೋಟಕ್ಕೆ ಮಂಗಗಳು ಖಾಯಂ ಗಿರಾಕಿ. ಮಂಗಗಳ ಮಧ್ಯೆ ಇದ್ದ ಪುಟ್ಟ ಮರಿ ಮಂಗ ವಿದ್ಯುತ್ ತಂತಿಗೆ ತಾಗಿ ಸತ್ತು ಬಿಟ್ಟಿತು. ಇದಾದ ತಕ್ಷಣ ಮಂಗಗಳು ತಮ್ಮ ಮನೆಯ ಪುಟಾಣಿಯನ್ನು ಕಳಕೊಂಡು ರೋದಿಸತೊಡಗಿದವು. ತಂತಿ ತಾಗಿ ಕೆಳಗೆ ರಸ್ತೆಗೆ ಬಿದ್ದ ಪುಟ್ಟ ಮಂಗನ ನೋಡಲು ಬಂದವರಿಗೆ ದುರುಗುಟ್ಟ ತೊಡಗಿದವು. ಅಲ್ಲಿ ಒಂದು ಕ್ಷಣ ಅಲ್ಲಿನ ವಾತಾವರಣ ನಮ್ಮ ಮನೆಯಲ್ಲಿ ನಡೆದ ಘಟನೆಯೋ ಎಂಬಂತೆ ಕಾಣ ತೊಡಗಿತು. ಸುತ್ತಮುತ್ತ ಸೇರಿರುವ ಜನ. ಕೆಳಗೆ ರಸ್ತೆಯಲ್ಲಿ ಬಿದ್ದಿರುವ ಪುಟಾಣಿ ಮಂಗ. ಬದಿಯ ಕಂಪೌಂಡು ನ ಮೇಲೆ ತನ್ನ ಕಂದನನ್ನು ನೋಡಲು ಹಾತೊರೆಯುವ ತಾಯಿ ಮಂಗ . ತಾಯಿ ಮಂಗಕ್ಕೆ ಸಾಂತ್ವನ ಹೇಳುತ್ತಿರುವ ತಂದೆ… ಅದ್ಭುತವಾದ ಸಂವೇದನಾ ಕ್ಷಣ ನೆರೆದವರನ್ನು ಭಾವುಕರನ್ನಾಗಿ ಮಾಡಿತು. ಕ್ಷಣಕ್ಕೊಮ್ಮ ಕೆಳಗೆ ಬಂದು ರಸ್ತೆಯಲ್ಲಿ ಬಿದ್ದಿದ್ದ ತನ್ನ ಕಂದನನ್ನು ನೋಡಿ ತನ್ನ ನೋವನ್ನು ವ್ಯಕ್ತಪಡಿಸುವ ತಾಯಿ ಮಂಗನ ಮೂಕ ವೇದನೆಯನ್ನು ಕಂಡು ನೆರೆದವರು ಮೌನವಾದರು.ಅಲ್ಲಿಗೆ ಬಂದ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಉಪಾಯದಿಂದ ತನ್ನ ವಾಹನದಲ್ಲಿ ಪುಟ್ಟ ಮಂಗನ ಶವವನ್ನು ಪಾಕಿಕೊಂಡು ಹೋದರು. ಈ ಘಟನೆ ನಡೆದಿದ್ದೇ ತಡ ಎಲ್ಲೋ ಇದ್ದ ತರ ಮಂಗಗಳು ಚೀರಿಡುತ್ತಾ ಓಡಿ ಬಂದವು. ತಂದೆ ಮತ್ತು ತಾಯಿ ಮಂಗ ರೋದಿಸಿದವು ಎಲ್ಲೆಡೆ ಓಡಿ ತನ್ನ ಮರಿಯ ದೇಹಕ್ಕಾಗಿ ಹುಡುಕಾಡಿದವು. ಈ ದೃಶ್ಯವನ್ನು ಕಂಡ ನೆರೆದವರ ಕಣ್ಣಾಲಿಗಳು ಒಂದು ಕ್ಷಣ ತೇವಗೊಂಡವು.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿದರು.ಬಳಿಕ ಪುಟಾಣಿ ಮಂಗನ ದೇಹವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಮೊದಲು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು. ಅಕಸ್ಮಾತ್ ನಾವೇ ಕ್ರಮ ಕೈಗೊಳ್ಳಲು ಮುಂದಾದರೆ ಕಾನೂನು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಸಾಮಾನ್ಯವಾಗಿ ಮಂಗಗಳು ತುಂಬಾ ಸಂವೇದನಾ ಶೀಲವಾಗಿರುತ್ತವೆ. ತಮ್ಮ ಬಳಗದ ಯಾವುದೇ ಮಂಗ ಸತ್ತಾಗ ತೀವ್ರ ನೋವನ್ನು ವ್ಯಕ್ತಪಡಿಸುತ್ತವೆ. ತಮ್ಮ ಸಂಬಂದಿಯನ್ನು ಕಳಕೊಂಡ ದುಖದಲ್ಲಿ ಯಾರನ್ನೂ ಹತ್ತಿರಸುಳಿಯ ಬಿಡುವುದಿಲ್ಲ. ತಹ ಸಂದರ್ಭದಲ್ಲಿ ಯಾರೇ ಬಂದರೂ ಮಂಗಗಳು ಹಾನಿ ಮಾಡುತ್ತವೆ. ಮನುಷ್ಯರಂತೆಯೇ ಮಕ್ಕಳ ಮಮತೆ ಸಂಬಂಧಿಯನ್ನು ಕಳಕೊಂಡ ವೇದನೆಯನ್ನು ಮಂಗಗಳು ತೋರ್ಪಡಿಸುತ್ತವೆ.

ಕೆಲವೊಮ್ಮೆ ರಸ್ತೆಯಲ್ಲಿ ಯಾರಾದರೂ ಬಿದ್ದು ಸತ್ತಾಗ ನೋಡಿಯೂ ನೋಡದಂತೆ ಹೋಗುವ ಅನೇಕ ಜನರಿದ್ದಾರೆ. ನಮ್ಮವರೇ ಸತ್ತರೂ ಏನೂ ಆಗದಂತೆ ಹಾಯಾಗಿರುವ ಜನ ಇರ್ತಾರೆ ಆದರೆ ತನ್ನ ಕಂದಮ್ಮವೊಂದು ಸತ್ತಾಗ ರೋದಿಸುವ ಮೂಕ ಪ್ರಾಣಿಗಳ ರೋದನೆ ಎಂತಹ ಕಲ್ಲು ಹೃದಯವನ್ನೂ ಕರಗಿಸಬಲ್ಲದು.
_________________________

Comments are closed.