ಗಲ್ಫ್

ಡಿ.2 ರಂದು ಕೆ ಐ ಸಿ ವತಿಯಿಂದ ದುಬೈಯಲ್ಲಿ ಬೃಹತ್ ಮೀಲಾದ್ ಸಮಾವೇಶ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆ

Pinterest LinkedIn Tumblr

notice-kannada-meelad-dubai

ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಹಾಗೂ ಕರ್ನಾಟಕ ಕಲ್ಚರಲ್ ಸೆಂಟರ್ ಅಧೀನದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮ ಹಾಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯು 02 ಡಿಸೆಂಬರ್ 2016 ರಂದು ಬನಿಯಾಸ್ ರಸ್ತೆಯಲ್ಲಿರುವ ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಹಲವಾರು ಸಾಮಾಜಿಕ ದಾರ್ಮಿಕ ನೇತಾರರು , ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು ಅರಬ್ ಸ್ವದೇಶಿಗಳು ಹಾಗೂ ತಾಯಿನಾಡಿನಿಂದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅದ್ಯಕ್ಷರಾದ ಲತೀಫ್ ಕೌಡಿಚ್ಚಾರ್ , ಕಾರ್ಯದರ್ಶಿ ಆಸೀಫ್ ಮರೀಲ್ ರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಡಿಸೆಂಬರ್ 2 ರಂದು ಮಧ್ಯಾಹ್ನ 3.00 ಘಂಟೆಯಿಂದ ಅನಿವಾಸಿ ಕನ್ನಡಿಗರಿಗಾಗಿ ಹಿರಿಯ ಕಿರಿಯ ವಿಭಾಗಳಲ್ಲಿ ಇಸ್ಲಾಮಿಕ್ ಭಾಷಣ , ನಬಿ ಮದಹ್ ಗಾನ ಮೊದಲಾದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಮಗ್ರಿಬ್ ನಮಾಜ್ಹಿನ ಬಳಿಕ ಸಂಜೆ 6.00 ಗಂಟೆಯಿಂದ ಆಕರ್ಷಣೀಯ ದಫ್ಫ್ ಕಾರ್ಯಕ್ರಮ ನಡೆಯಲಿದ್ದು ಬುರ್ದಾ ಆಲಾಪನೆ ಯು ನಡೆಯಲಿದೆ . ನಂತರ ಸಭಾ ಕಾರ್ಯಕ್ರಮವು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದ ನೇತಾರರು , ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು , ಅಕಾಡೆಮಿ ಪಧಾಧಿಕಾರಿಗಳು ಭಾಗವಹಿಸಲಿದ್ದು , ಮಹಿಳೆಯರಿಗಾಗಿ ಪ್ರೇತ್ಯೇಕ ಆಸನದ ವ್ಯವಸ್ಥೆ ಗೊಳಿಸಲಾಗಿದೆ. ಅನಿವಾಸಿ ದೀನೀ ಪ್ರೇಮಿಗಳು ಕೆ ಐ ಸಿ ಹಿತೈಷಿಗಳೂ ಆದ ತಾವೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಯಲ್ಲಿ ಈ ಕಾರ್ಯಕಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.