ಕರಾವಳಿ

ಯಕ್ಷಾಂಗಣ ಸಪ್ತಾಹದಲ್ಲಿ ಎ.ಕೆ. ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ಸಂಸ್ಮರಣೆ

Pinterest LinkedIn Tumblr

 

yaksa_saptaha_samskkarane

ಮಂಗಳೂರು : `ಯಕ್ಷಗಾನದ ವಾಚಿಕ ಪ್ರಕಾರವಾದ ತಾಳಮದ್ದಳೆ ಮಾತು ಹಾಗೂ ಆಂಗಿಕಾಭಿನಯಗಳಿಂದ ಜನಾಕರ್ಷಣೆ ಪಡೆದ ಕಲೆ. ಆದ್ದರಿಂದ ಅದನ್ನು ದೃಶ್ಯ-ಶ್ರಾವ್ಯ ಸಮನ್ವಿತ ಕಲೆಯೆಂದು ಕರೆಯಬಹುದು. ತಾಳಮದ್ದಳೆಯನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ ಹಿರಿಯರು ಸ್ಮರಣೀಯರು’ ಎಂದು ಕಟೀಲು ಕ್ಷೇತ್ರದ ಅರ್ಚಕ ಹಾಗೂ ತಾಳಮದ್ದಳೆ ಅರ್ಥಧಾರಿ ಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.

`ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕರ್ನಾಟಕ ಯಕ್ಷ ಭಾರತಿ (ರಿ) ಪುತ್ತೂರು ಮತ್ತು ಎಸ್.ಡಿ.ಎಂ. ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರಿನ ಎಸ್.ಡಿ.ಎಂ, ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ “ಸುಂದರ ಅರ್ಥಸರಣಿ” ಯಕ್ಷಗಾನ ತಾಳಮದ್ದಲೆ ಸಪ್ತಾಹ -2016 ರ 6ನೇ ದಿನ ಕೀರ್ತಿಶೇಷ ಅರ್ಥದಾರಿಗಳಾದ ದಿವಂಗತ ಎ.ಕೆ. ನಾರಾಯಣ ಶೆಟ್ಟಿ ಮತ್ತು ದಿವಂಗತ ಎ.ಕೆ.ಮಹಾಬಲ ಶೆಟ್ಟಿ ಯವರ ಸಂಸ್ಮರಣೆ ಮಾಡಿ ಅವರು ಮಾತನಾಡಿದರು.

ಮೂಡಬಿದರೆ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್ ಸಂಸ್ಮರಣಾ ಜ್ಯೋತಿ ಬೆಳಗಿದರು. ಮಹೇಶ್ ಮೋಟಾರ್ಸ್ ನ ಎ.ಕೆ. ಜಯರಾಮ ಶೇಖ ನುಡಿನಮನ ಸಲ್ಲಿಸಿದರು. ಮಂಗಳೂರಿನ ಕುಟುಂಬ ವೈದ್ಯ ಡಾ|| ಜಿ.ಕೆ.ಭಟ್ ಸಂಕಬಿತ್ತುಲು, ಉದ್ಯಮಿ ಮತ್ತು ಯಕ್ಷಗಾನ ಸಂಘಟಕ ಕರುಣಾಕರ ಶೆಟ್ಟಿ ಪಣಿಯೂರು, ಹಿರಿಯ ಅರ್ಥದಾರಿ ದುಗ್ಗಪ್ಪ ಆಳ್ವ, ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು ಮುಖ್ಯ ಅತಿಥಿಗಳಾಗಿದ್ದರು.

ವಕ್ವಾಡಿ ಶೇಖರ ಶೆಟ್ಟಿ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಶಿವಾನಂದ ಕರ್ಕೇರ, ಡಾ|| ದಿನಕರ ಎಸ್. ಪಚ್ಚನಾಡಿ,ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಲಕ್ಷ್ಮೀ ನಾರಾಯಣ ರೈ ಹರೇಕಳ, ತೋನ್ಸೆ ಷ್ಕಳ ಕುಮಾರ್, ಸಿದ್ದಾರ್ಥ ಅಜ್ರಿ, ನಿವೇದಿತಾ ಎನ್. ಶೆಟ್ಟಿ, ಶೋಭಾ ಕೇಶವ ಕಣ್ಣೂರು ವೇದಿಕೆಯಲ್ಲಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಬಾಸ್ಕರ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಎಂ ಸುಂದರ್ ಶೆಟ್ಟಿ ಬೆಟ್ಟಂಪಾಡಿ ವಂದಿಸಿದರು. ಸುದಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಲಿಪ ಶಿವಶಂಕರ ಭಟ್ ಮತ್ತು ಪ್ರಶಾಂತ ರೈ ಮುಂಡಾಳ ಅವರ ಭಾಗವತಿಕೆಯಲ್ಲಿ “ಸುಂದರ ಕರ್ಣ” ತಾಳಮದ್ದಲೆ ಜರಗಿತು.

Comments are closed.