ಕರಾವಳಿ

ಹೊಸಂಗಡಿಯಲ್ಲಿ ಕಾಡುಕೋಣದ ಮೃತದೇಹ ಪತ್ತೆ; ಬೇಟೆಗಾರರ ಗುಂಡೇಟಿಗೆ ಬಲಿಯಾಯಿತೇ ಕಾಡುಕೋಣ..?

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಹೊಸಂಗಡಿಯ ಮಂಡಗದ್ದೆ ಎಂಬಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತದೇಹವೊಂದು ಪತ್ತೆಯಾಗಿದ್ದು ಬೇಟೆಗಾರರ ಗುಂಡಿಗೆ ಕಾಡುಕೋಣ ಬಲಿಯಾಗಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

kundapura_kadukona_deadbody-3 kundapura_kadukona_deadbody-2 kundapura_kadukona_deadbody-4 kundapura_kadukona_deadbody-6 kundapura_kadukona_deadbody-1 kundapura_kadukona_deadbody-5

ಹೊಸಂಗಡಿ ಗ್ರಾಮದ ಮಂಡಗದ್ದೆ ಎಂಬಲ್ಲಿನ ಮೆಟ್ಕಲ್ಲುಗುಡ್ಡ ಸುರಕ್ಷಿತ ಅಭಯಾರಣ್ಯದ 100 ಮೀಟರ್ ವ್ಯಾಪ್ತಿಯ ಹಕ್ಲು ಭಾಗದಲ್ಲಿ ಇಂದು ಬೆಳಿಗ್ಗೆ ಕಾಡುಕೋಣದ ಮೃತದೇಹ ಪತ್ತೆಯಾಗಿದೆ. ಕೊಳೆತ ವಾಸನೆ ಬರುತ್ತಿದ್ದ ಕಾಡುಕೋಣದ ಶವದ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಆಗಮಿಸಿ ಪರಿಶೀಲನೆ ನಡೆಸಿದ್ದು ಅಂದಾಜು 5 ವರ್ಷ ಪ್ರಾಯದ ಕಾಡುಕೋಣ ಇದಾಗಿದೆ ಎನ್ನಲಾಗಿದೆ. ಅಲ್ಲದೇ ಕಾಡುಕೋಣದ ಶರೀರದ ಹಿಂಭಾಗದಲ್ಲಿ ಎರಡು ಗಾಯದ ಗುರುತುಗಳು ಪತ್ತೆಯಾಗಿದೆ.

ಇಂದು ಭಾನುವಾರವಾದ ಕಾರಣ ಮೃತಶರೀರವನ್ನು ಸುರಕ್ಷಿತ ಸ್ಥಳದಲ್ಲಿರಿಸಿ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತೆ, ಇದರ ಬಳಿಕ ಕಾಡುಕೋಣದ ಸಾವಿನ ಬಗೆಗಿನ ಮಾಹಿತಿ ಸಿಗಲಿದೆ ಎಂದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಬ್ರಿಜೇಶ್ ವಿನಯಕುಮಾರ್ ತಿಳಿಸಿದ್ದಾರೆ.

Comments are closed.