ಕರಾವಳಿ

ಉಡುಪಿ: ಕಾರು ಢಿಕ್ಕಿಯಾಗಿ ತಾಯಿ-ಮಗು ಸಾವು

Pinterest LinkedIn Tumblr

ಉಡುಪಿ: ವೇಗವಾಗಿ ಚಲಿಸಿ ಬಂದ ಕಾರು ರಸ್ತೆ ಸಮೀಪ ಬಸ್ಸಿಗೆ ಕಾಯುತ್ತಿದ್ದ ತಾಯಿ ಹಾಗೂ ಮಗುವಿಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಉಡುಪಿಯ ಪಾಂಗಳದಲ್ಲಿ ನಡೆದಿದೆ. ಕಾಪು ನಿವಾಸಿಗಳಾದ ಪುಷ್ಪಲತಾ (36) ತಕ್ಷಿ (3) ಮೃತ ದುರ್ದೈವಿಗಳು.

udupi_kapu_accident-1 udupi_kapu_accident-2

ರಾಷ್ಟ್ರೀಯ ಹೆದ್ದಾರಿ 66 ಸಮೀಪ ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ವೇಗವಾಗಿ ಬಂದ ಕಾರು ಹರಿದ ದುರ್ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮ್ರತಪಟ್ಟಿದ್ದಾರೆ. ಚಾಲಕನ ಅತೀ ವೇಗ ಹಾಗೂ ಅಜಾಗರುಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಕೇರಳ ಮೂಲದ ಸ್ವಿಫ್ಟ್ ಕಾರು ಇದಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.