ಉಡುಪಿ: ತನ್ವೀರ್ ಸೇಠ್ ಅಶ್ಲೀಲ ಚಿತ್ರ ನೋಡಿಲ್ಲ ಅಂದ ಮೇಲೆ ಅದನ್ನ ನೋಡಿದವರು ಮೀಡಿಯಾದವ್ರಾ ಅಂತಾ ಈಶ್ವರಪ್ಪ ಗರಂ ಆಗಿದ್ದಾರೆ. ಸಿದ್ಧರಾಮಯ್ಯ ತಾನು ಸಿಎಂ ಅನ್ನೋದನ್ನು ಮರೆತು ಮಾತಾಡ್ತ ಇದ್ದಾರೆ. ಮಾಧ್ಯಮದವರ ವಿರುದ್ಧ ಸಿಎಂ ಮಾಡುತ್ತಿರೋ ಆರೋಪ ಸರಿಯಲ್ಲ ಅಂತಾ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪೇಜಾವರ ಶ್ರೀ ಗಳೊಂದಿಗೆ ಈಶ್ವರಪ್ಪ ಮಾತುಕತೆ ನಡೆಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರಪ್ಪ ಶಿಕ್ಷಣ ಮಂತ್ರಿಗಳ ನಡುವಳಿಕೆ ಬಗ್ಗೆ ನಾಘಿಗೆ ನಾಡು ಮಾತನಾಡುತ್ತಿದೆ. ತನ್ವಿರ್ ಸೇಠ್ ನಾಡಿನ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು. ಜನ ಕ್ಷಮಿಸಿದ್ರೆ ಅಧಿಕಾರಕ್ಕೆ ಬರಲಿ ಅಂತಾ ಈಶ್ವರಪ್ಪ ಶೇಠ್ ಸಾಹೇಬ್ರರಿಗೆ ಟಾಂಗ್ ನೀಡಿದ್ರು.
ಹಿಂದೂ ಧರ್ಮವನ್ನು ಟೀಕಿಸುತ್ತ ಅತ್ರಪ್ತ ಆತ್ಮದಂತೆ ಸುತ್ತುವ ಬುದ್ಧಿಜೀವಿಗಳು ವಿಚಾರವಾದಿಗಳು ಮಾತನಾಡ್ತ ಇದ್ದಾರೆ. ಅವರಿಗೆ ಮಠಾಧಿಪತಿಗಳು, ಹಿಂದೂಧರ್ಮವನ್ನು ಠೀಕೆ ಮಾಡುವುದೇ ಅವರ ಕೆಲಸ…ಅವರ ಮತಿಗೆ ಹೆಚ್ಚು ಮಣೆ ಹಾಕಬಾರದು. ಮನೆಯಲ್ಲಿ ಅವರ ಹೆಂಡತಿಯೇ ಅವರ ಮಾತು ಕೇಳಲ್ಲ. ಪುರಾಣ ಕಾಲದಲ್ಲಿ ರಾಕ್ಷಸರಿಂದ ಹಿಂದೂ ಧರ್ಮ ನಾಶ ಮಾಡೋಕೆ ಆಗಿಲ್ಲ , ಇನ್ನು ವಿಚಾರವಾದಿಗಳಿಂದ ಇದು ಅಸಾಧ್ಯವಾಗದ ಮಾತು ಅಂತಾ ಈಶ್ವರಪ್ಪ ಬುದ್ಧಿಜೀವಿಗಳ ಮಾತಿಗೆ ಮಹತ್ವ ನೀಡೋ ಅಗತ್ಯವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ರು.
ಜನಾರ್ಧನ ರೆಡ್ಡಿ ಮನೆ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡೊಲ್ಲ ಅದು ಅವರ ಖಾಸಗಿ ವಿಚಾರ, ಅವರ ಮನೆ ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದ್ರು.