ಕರಾವಳಿ

ಮಂಗಳೂರಿನಲ್ಲಿ ಮನಸೆಳೆದ ಶ್ವಾನ ಪ್ರದರ್ಶನ

Pinterest LinkedIn Tumblr

dog_show_mlore_1

ಮಂಗಳೂರು: ಕರಾವಳಿ ಕೆನೈನ್ ಕ್ಲಬ್ ವತಿಯಿಂದ 5ನೇ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನಗರದ ಪಾಂಡೇಶ್ವರದಲ್ಲಿರುವ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಇಂದು ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲು ಅವರು,ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕ್ಲಬ್‌‌ನ ಪ್ರಸಾದ್ ಐತಾಳ್, ನಿಶ್ವಿತ್ ಆರ್.ಕೆ. ರಾವ್ ಹಾಗೂ ವಿಶ್ವನಾಥ್ ಕಾಮತ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

dog_show_mlore_2 dog_show_mlore_3 dog_show_mlore_4 dog_show_mlore_5 dog_show_mlore_6

ದೆಹಲಿ, ಕಲ್ಕತ್ತಾ, ಜೆಮ್‌‌‌ಶೆಡ್‌‌ಪುರ, ಸೋಲಾಪುರ ಮೊದಲಾದೆಡೆಯ ಪ್ರಸಿದ್ಧ 30ಕ್ಕೂ ಅಧಿಕ ತಳಿಗಳ 270ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

dog_show_mlore_7 dog_show_mlore_8 dog_show_mlore_9 dog_show_mlore_10 dog_show_mlore_12

1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶ್ವಾನಗಳಿಗೆ `ಬೆಸ್ಟ್ ಪಪ್ಪಿ’ ಪ್ರಶಸ್ತಿ, ಉಳಿದ ವಿಭಾಗಗಳಿಗೆ ಟ್ರೋಪಿ ಹಾಗೂ ಚಾಂಪಿಯನ್‌‌ ಶಿಪ್‌‌‌ಗಳನ್ನು ನೀಡಲಾಗುತ್ತದೆ. ಆಸ್ಟ್ರೇಲಿಯಾದ ಹೆದರ್ ಮಾರಿಸನ್, ಸಿಂಗಾಪುರದ ಸ್ಟ್ಯಾನ್ಲಿ ಸಿಮ್, ಬೆಂಗಳೂರಿನ ಟಿ. ಪ್ರೀತಮ್, ಕೊಯಂಬತ್ತೂರಿನ ಡಿ. ಕೃಷ್ಣಮೂರ್ತಿ ತೀರ್ಪುಗಾರರಾಗಿದ್ದಾರೆ.ಸಾರ್ವಜನಿಕರಿಗೆ ಶ್ವಾನ ಪ್ರದರ್ಶನ ವೀಕ್ಷಿಸಲು 50 ರೂ. ಶುಲ್ಕ ವಿಧಿಸಲಾಗಿದೆ. ಶ್ವಾನಗಳ ಪ್ರದರ್ಶನ ಭಾನುವಾರವೂ ಮುಂದುವರೆಯಲಿದೆ.

Comments are closed.