ಕುಂದಾಪುರ: ಎಲ್ಲಿ ನೋಡಿದರೂ ಪೊಲೀಸರು, ಅಲ್ಲಲ್ಲಿ ಶೆಡ್ ನೆಲಸಮಗೊಳಿಸುತ್ತಿರುವ ಜನರು, ಬ್ಯಾಗ್ ಮೊದಲಾದವುಗಳನು ಹೊತ್ತು ನಿಂತಕಾರ್ಮಿಕರು, ಒಂದೆಡೆ ಕೋಲಾಹಲ, ಜೆಸಿಬಿ ಮೂಲಕ ಮರಳು ತುಂಬುವ ದ್ರಶ್ಯ. ಇದೆಲ್ಲಾ ಕಂಡುಬಂದಿದ್ದು ಕುಂದಾಪುರದ ವಿವಿದೆಡೆ ಅಕ್ರಮ ಮರಳುಗಾರಿಕೆ ಮೇಲೆ ನಡೆದ ಅಧಿಕಾರಿಗಳ ದಾಳಿಯ ವೇಳೆ. ಅಲ್ಲಿ ಏನೆಲ್ಲಾ ಆಯ್ತು ಅನೋದಕ್ಕೆ ಈ ಸ್ಟೋರಿ ಓದಿ.
ಶುಕ್ರವಾರ ಬೆಳ್ಳಂಬೆಳಿಗ್ಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಗಳ್ಗೆ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ರು. ಕುಂದಾಪುರ ತಾಲೂಕಿನ ಕಂಡ್ಲೂರು, ಬಳ್ಕೂರು, ಗುಲ್ವಾಡಿ ಮೊದಲಾದ ಪ್ರದೇಶಗಳಲ್ಲಿ ಹೊಳೆ ಸಮೀಪದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಹಲವಾರು ಬಾರೀ ಮಾಧ್ಯಮಗಳು ವರದಿ ಬಿತ್ತರಿಸಿತ್ತು ಅಲ್ಲದೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಎಲ್ಲರೂ ಜಾಣ ಕುರುಡು ಪ್ರದರ್ಶಿಸಿದ್ದರು. ಈ ಬಗ್ಗೆ ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಅವರಿಗೂ ದೂರು ಬಂದಿತ್ತು. ಹಿಂದೆಮುಂದೆ ನೋಡದ ಅವರು ಶುಕ್ರವಾರ ಅಧಿಕಾರಿಗಳ ಜೊತೆ ದಿಡೀರ್ ದಾಳಿಗೆ ಮುಂದಾಗಿದ್ರು. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಗಳಲ್ಲಿರುವ ಕಾರ್ಮಿಕರ ಶೆಡ್ ನೆಲಸಮಗೊಳಿಸಿದ್ದಲ್ಲದೇ ದಡದಲ್ಲಿ ರಾಶಿ ಹಾಕಿದ್ದ ಮರಳನ್ನು ಲಾರಿಯಲ್ಲಿ ತುಂಬಿಸಿ ಮರಳು ಯಾರ್ಡಿಗೆ ಸಾಗಿಸಲಾಯ್ತು.
ಕುಂದಾಪುರದ ಉಪವಿಭಾಗಾಧಿಕಾರಿ ಅಶ್ವಥಿ ನೇತ್ರತ್ವದಲ್ಲಿ ಕುಂದಾಪುರ ತಹಶಿಲ್ದಾರ್ ಜಿ.ಎಂ. ಬೋರ್ಕರ್, ಗಣಿಭೂ ವಿಜ್ನಾನ ಇಲಾಖೆಯ ಅಧಿಕಾರಿ ಮಹಾದೇಶ್ವರ ಹಾಗೂ ಪಿಡ್ಬ್ಲ್ಯೂಡಿ ಇಂಜಿನಿಯರ್ ಚಂದ್ರಶೇಖರ್ ಹಾಗೂ ಕುಂದಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಇತರರು ಈ ದಾಳಿ ನಡೆಸಿದ್ರು. ದಾಳಿ ಸಂದರ್ಭ ಹೊರ ರಾಜ್ಯದಿಂದ ಬಂದ ಕರ್ಮಿಕರನ್ನು ಓಡಿಸಿದ ಬಗ್ಗೆ ಹಾಗೂ ಜೆಸಿಬಿ ಮೂಲಕ ಟೆಂಟ್ ತೆರವು ಮಾಡಲು ಹೊರಟ ಬಗ್ಗೆ ಸಾರ್ವಜನಿಕರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಹೊಟ್ಟೆಪಾಡಿಗಾಗಿ ಉತ್ತರ ಪ್ರದೇಶದಿಂದ ಬಂದ ನೂರಾರು ಕಾರ್ಮಿಕರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಹೊಳೆ ದಡದಲ್ಲಿ ವಾಸವಿದ್ರು. ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅರ್ದಂಬರ್ಧ ಊಟ ಮಾಡುತ್ತಾ ಓಡಿದು, ಗಂಟುಮೂಟೆ ಕಟ್ಟಿ ಹೊರಡಲು ಸಿದ್ದರಾದ ಕಾರ್ಮಿಕರು ಮೂಕವಿಸ್ಮಿತರಾಗಿದ್ದರು.
(ಅಶ್ವಥಿ- ಕುಂದಾಪುರ ಉಪವಿಭಾಗಾಧಿಕಾರಿ)
ತಿಂಗಳುಗಟ್ಟಲೇ ಮರಳುಗಾರಿಕೆ ಸ್ಥಗಿತಗೊಂಡಿದ್ದು ಈ ಹಿಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಮರಳುಗಾರಿಕೆನಡೆಸಲು ಅನುಮತಿ ನೀಡಲಾಗಿತ್ತು. ಈ ವೇಳೆ ಸ್ಥಳೀಯರು ಹಾಗೂ ಟೆಂಡರ್ ವಹಿಸಿಕೊಂಡವರಿಗೂ ಒಪ್ಪಂದ ನಡೆದಿದ್ದು ಟೆಂಡರ್ ಪ್ರಕ್ರಿಯೆಯಿರುವ ನಿರ್ಧಿಷ್ಟ ಸ್ಥಳಲದಲ್ಲಿ ಸ್ಥಳೀಯರು ಮರಳು ತೆಗೆದು ಮರಳು ಯಾರ್ಡಿಗೆ ಹಾಕುವ ಒಂದು ನಿರ್ಧಾರಕ್ಕೂ ಬರಲಾಯ್ತು. ಆದರೇ ಟೇಂಡರ್ ಆಗಿರುವ ನಿರ್ಧಿಷ್ತ ಜಾಗವನ್ನು ಹೊರತುಪಡಿಸಿ ಬಹುತೇಕ ಭಾಗಗಳಲ್ಲಿ ಈ ಅಕ್ರಮ ಮರಳುಗಾರಿಕೆ ಆರಂಭವಾಗಿದ್ದು ಸ್ಥಳಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಮರಳುಗಾರಿಕೆಯ ಈ ಸಮಸ್ಯೆ ಮುಂದುವರೆಯುವುದು ಸಾಮಾನ್ಯವಾಗಿದ್ದು ಸಾಂಪ್ರದಾಯಿಕ ಮರಳುಗಾರಿಕೆ ಆರಂಭ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದನೆನೀಡಬೇಕು. ಅಲ್ಲಿಯವರೆಗೂ ಟೆಂಡರ್ ಮರಳುಗಾರಿಎಯೂ ನಿಲ್ಲಬೇಕೆಂದು ಆಗ್ರಹಿಸಲಾಯ್ತು.
ಒಟ್ಟಿನಲ್ಲಿ ಒಂದು ವಾರದಿಂದ ಆರಂಭಗೊಂಡ ಮರಳುಗಾರಿಕೆ ಇದೀಗ ಅಕ್ರಮದತ್ತ ಸಾಗುತ್ತಿದ್ದು ಸಂಪೂರ್ಣ ಬಂದ್ ಆಗುವ ಸಾಧ್ಯತೆಗಳು ಜಾಸ್ಥಿಯಿದೆ. ಅಕ್ರಮ ಮರಳುಗಾರಿಕೆಯ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ.
Comments are closed.