ಕರಾವಳಿ

ಮೀಸಲಾತಿ ಪ್ರಕಟ : ಮನಪಾ ಮುಂದಿನ ಮೇಯರ್ ಸ್ಥಾನ ಮಹಿಳೆಗೆ

Pinterest LinkedIn Tumblr

mcc_news_photo_a

ಮಂಗಳೂರು ನ. 10: ಈ ಬಾರಿ ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಸ್ಥಾನಕ್ಕೆ ಮಹಿಳಾ ಮೀಸಲಾತಿ ಪ್ರಕಟವಾಗಿದೆ.

ಹಾಲಿ ಮೇಯರ್ ಹರಿನಾಥ್ ಅವರ ಅಧಿಕಾರಾವಧಿ 2017ರ ಮಾರ್ಚ್ 11ಕ್ಕೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪ್ರಕಟವಾಗಿದೆ.

ಸರಕಾರ ಹೊರಡಿಸಿರುವ ಈ ಮೀಸಲಾತಿಯಿಂದಾಗಿ ಪಾಲಿಕೆಯ ಆಡಳಿತ ಪಕ್ಷ ಕಾಂಗ್ರೆಸ್‌ನ್ ಎಲ್ಲ 14 ಮಹಿಳಾ ಕಾರ್ಪೊರೇಟರ್ಗಳು ಮೇಯರ್ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿದ್ದು, ಕೆಲವು ಪ್ರಮುಖ ಮಹಿಳಾ ಕಾರ್ಪೊರೇಟರ್ ಗಳ ಹೆಸರುಗಳು ಮುಂಚೂಣಿದ್ದು ಈಗಿನಿಂದಲೇ ಮೇಯರ್ ಪಟ್ಟಕ್ಕೆ ಕಸರತ್ತು ಆರಂಭಗೊಂಡಿದೆ.

Comments are closed.