ಕರಾವಳಿ

ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಕಣ್ಮನಸೆಳೆದ “ಗೂಡು ದೀಪಗಳು”

Pinterest LinkedIn Tumblr

kudroli_gudu_deepa_1

ಮಂಗಳೂರು,ಅ.29 : ಕಳೆದ ಹದಿನೇಳು ವರ್ಷಗಳಿಂದ ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಜನಜೀವನಕ್ಕೆ‌ ಒತ್ತುಕೊಡುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವ ಜಿಲ್ಲೆಯ ತುಳು ವಾರ್ತಾವಾಹಿನಿ ನಮ್ಮ ಕುಡ್ಲ ವತಿಯಿಂದ ವರ್ಷಾಂ ಪ್ರತಿಯಂತೆ ನಡೆಯುವ ನಮ್ಮ ಕುಡ್ಲ ಗೂಡುದೀಪ ಪಂಥ‌ ಶುಕ್ರವಾರ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು.

ಈ ಗೂಡುದೀಪ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ಮಾದರಿ ಅಥವಾ ಪ್ರತಿಕೃತಿ ಹೀಗೆ ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಾರು ಗೂಡುದೀಪಗಳು ಕಣ್ಮನಸೆಳೆದವು.

ಗೂಡುದೀಪಗಳ ಪಂಥದಲ್ಲಿ ತುಳುನಾಡಿನ ಗಂಡು ಕಲೆ ಯಕ್ಷಗಾನ (ದೇವಿಮಹಾತ್ಮೆ ಪ್ರಸಂಗ), ದೈವರಾಧನೆ, ನಾಗಬನ, ಮಂಗಳೂರು ದಸರಾ ವೈಭವ, ಜಿಲ್ಲೆಯ ವಿವಿಧ ದೇವಸ್ಥಾನಗಳ ಪ್ರತಿಕೃತಿಗಳು, ಪ್ರವಾಸಿ ತಾಣಗಳು, ಪಶ್ಚಿಮ ಬಂಗಾಳದ ರಾಧಾಕೃಷ್ಣನ ದೇವಸ್ಥಾನವೊಂದರ ಪ್ರತಿಕೃತಿ, ಪ್ರವಾಸಿ ಹಡಗು, ಭತ್ತದಿಂದಲೇ ಮಾಡಿ ಗಣಪತಿ, ಎಲ್ಲವೂ ರಿಮೋಟ್‍ನಲ್ಲೇ ನಿಯಂತ್ರಿಸುವ ದೇವಸ್ಥಾನದ ಆಚಾರ, ಸಂಪ್ರದಾಯಗಳು ಹಾಗೂ ಧಾನ್ಯಗಳಿಂದಲೇ ಮಾಡಿದ ಅದೆಷ್ಟೋ ಗೂಡುದೀಪಗಳು ಮನಸೂರೆಗೊಂಡವು.

kudroli_gudu_deepa_2 kudroli_gudu_deepa_3 kudroli_gudu_deepa_4 kudroli_gudu_deepa_5 kudroli_gudu_deepa_6 kudroli_gudu_deepa_7 kudroli_gudu_deepa_8 kudroli_gudu_deepa_9 kudroli_gudu_deepa_10 kudroli_gudu_deepa_11 kudroli_gudu_deepa_12 kudroli_gudu_deepa_13 kudroli_gudu_deepa_14 kudroli_gudu_deepa_15 kudroli_gudu_deepa_16 kudroli_gudu_deepa_17 kudroli_gudu_deepa_18 kudroli_gudu_deepa_19 kudroli_gudu_deepa_20

ಒಂಭತ್ತು ಕಡೆಲೆಗಳಿಂದ ನಿರ್ಮಿತವಾದ ಗೂಡುದೀಪಗಳು, ಸೆಣಬು, ಏನೂ ಪ್ರಯೋಜನವಿಲ್ಲವೆಂದು ಬಿಸಾಕಿನ ಕಬ್ಬಿನ ಜಲ್ಲೆ, ಸೋಡಾ ಗೋಲಿಗಳು, ಹಲಸಿನ ಮರದ ತೊಗಟೆ, ಎಲೆಗಳು, ಬೆಂಕಿ ಕಡ್ಡಿ, ಪೆನ್ಸಿಲ್ ಮೊನೆ ಮಾಡುವಾಗ ಹೊರಹಾಕುವ ಚೂರುಗಳು, ಕಾಗದದ ಅಂಚು, ರಟ್ಟು, ಥರ್ಮೋಕೋಲ್, ವೀಳ್ಯೆದೆಲೆ, ಕ್ಯಾಂಡಲ್, ಸಾವಿರಾರು ಝಿಪ್‍ಗಳನ್ನು ಹೆಣೆದಿರುವ ಅಷ್ಟೇ ಏಕೆ ಸಾವಿರಾರು ಬ್ಲೇಡ್‍ಗಳು ಕೂಡಾ ಇಲ್ಲಿ ಕಲಾಕೃತಿಗಳಾಗಿ ಹೊರಹೊಮ್ಮುಆ ಮೂಲಕ ಜನರ ಕಣ್ಮನ ತಣಿಸಿತು.

ವಿಜೇತರಿಗೆ ಬಂಗಾರದ ಪದಕ :

ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ನೀಡಲಾಯಿತು.

kudroli_gudu_deepa_21 kudroli_gudu_deepa_22 kudroli_gudu_deepa_23 kudroli_gudu_deepa_24 kudroli_gudu_deepa_25 kudroli_gudu_deepa_27 kudroli_gudu_deepa_28 kudroli_gudu_deepa_31 kudroli_gudu_deepa_32 kudroli_gudu_deepa_33 kudroli_gudu_deepa_34 kudroli_gudu_deepa_35 kudroli_gudu_deepa_36 kudroli_gudu_deepa_37 kudroli_gudu_deepa_38 kudroli_gudu_deepa_39 kudroli_gudu_deepa_40 kudroli_gudu_deepa_41 kudroli_gudu_deepa_42 kudroli_gudu_deepa_43 kudroli_gudu_deepa_26

ಪ್ರಶಸ್ತಿ/ಪುರಸ್ಕಾರ

ತುಳುನಾಡಿನಲ್ಲಿ ಜನಿಸಿ ತುಳು ಮಣ್ಣಿನ ಮಹತ್ವವನ್ನು ದೇಶ ವಿದೇಶಗಳಲ್ಲಿ ಹರಡಿ ಖ್ಯಾತಿ ಪಡೆದು, ಶಿಕ್ಷಣ, ಸಂಸ್ಕೃತಿ, ಸಮಾಜ ಸೇವೆ, ಉದ್ಯಮ ರಂಗ‌ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಮಾಡಿ ನಾಡಿಗೆ ಗೌರವತಂದು ಕೊಟ್ಟ ವ್ಯಕ್ತಿಗಳಿಗೆ “ನಮ್ಮ ತುಳುವೆರ್” ಪ್ರಶಸ್ತಿಯನ್ನು ಹಾಗೂ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ “ನಮ್ಮಕುಡ್ಲ ” ಪ್ರಶಸ್ತಿಯನ್ನು ಹಾಗೂ “ನಮ್ಮಕುಡ್ಲ ಪ್ರತಿಭಾ ಪುರಸ್ಕಾರ”ವನ್ನು ಗೂಡುದೀಪ ಸ್ಪರ್ಧೆಯ ಸಂದರ್ಭದಲ್ಲಿ ನೀಡುತ್ತಾ ಬಂದಿದೆ.

ಈ ಬಾರಿ ಸಮಾಜ ಸೇವಕಿ ಊರ್ಮಿಳಾ ರಮೇಶ್‌ಕುಮಾರ್ ಅವರಿಗೆ ನಮ್ಮ ತುಳುವೆರ್ ಪ್ರಶಸ್ತಿ, ಯಕ್ಷಗಾನದ ಚಾರ್ಲಿಚಾಪ್ಲಿನ್‌ ಸೀತಾರಾಮ್ ಕಟೀಲ್ ಅವರಿಗೆ ನಮ್ಮ `ನಮ್ಮ ಕುಡ್ಲ’ ಪ್ರಶಸ್ತಿ’, ಸಿ.ಎ. ಸಾಧಕಿ ಯಶಸ್ವಿನಿ ಕೆ. ಅಮೀನ್ ಅವರಿಗೆ ನಮ್ಮಕುಡ್ಲ ಪ್ರತಿಭಾ ಪುರಸ್ಕಾರ ಹಾಗೂ `ಬಿ.ಪಿ. ಕರ್ಕೇರ ದತ್ತಿನಿಧಿ ಪ್ರಶಸ್ತಿ’ಯನ್ನು ಕುದ್ರೋಳಿ ಗೋಕರ್ಣನಾಥ ಸೇವಾದಳಕ್ಕೆ ನೀಡಿ ಗೌರವಿಸಲಾಯಿತು.

Comments are closed.