ಕರಾವಳಿ

ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಕರಾವಳಿ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ

Pinterest LinkedIn Tumblr

karavali_colg_deepa_1

ಮಂಗಳೂರು, ಅಕ್ಟೋಬರ್. 29 : ಮಂಗಳೂರಿನ ಪ್ರತಿಷ್ಠಿತ ಕರಾವಳಿ ಕಾಲೇಜು ಸಮೂಹದ ವತಿಯಿಂದ ನಗರದ ಕೊಟ್ಟಾರದ ಕಾಲೇಜು ಆವರಣದಲ್ಲಿ ಶುಕ್ರವಾರ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

karavali_colg_deepa_2 karavali_colg_deepa_3 karavali_colg_deepa_4 karavali_colg_deepa_5 karavali_colg_deepa_6 karavali_colg_deepa_7 karavali_colg_deepa_8 karavali_colg_deepa_9 karavali_colg_deepa_10 karavali_colg_deepa_11 karavali_colg_deepa_12

ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಜಿ.ಆರ್ ಎ.ಜ್ಯುಕೇಶನ್ ಹಾಗೂ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರ ನೇತ್ರತ್ವದಲ್ಲಿ ನಡೆದ ಈ ದೀಪಾವಳಿ ಹಬ್ಬ ಅಚರಣೆ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೋ, ವಿ ಎಚ್ ಪಿ ಪ್ರಮುಖ್ ಎಂ.ಬಿ.ಪುರಾಣಿಕ್, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾ| ಪ್ಯಾಟ್ರಿಕ್ ರೋಡ್ರಿಗಸ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶ್ರೀ ಧರ್ಮಸ್ಥಳ ಮಂಜುನಾಥ ಉದ್ಯಮಾಡಳಿತ ಕಾಲೇಜಿನ ನಿರ್ದೇಶಕ ದೇವರಾಜ್ ಮುಂತಾದವರು ಅತಿಥಿಗಳಾಗಿದ್ದರು. ಕಾಲೇಜು ಆಡಳಿತಾ ಮಂಡಳಿಯ ನಿರ್ದೇಶಕಿ ಶ್ರೀಮತಿ ಲತಾ.ಜಿ.ರಾವ್. ಪ್ರಾಂಶುಪಾಲ ಮೋಹನ್ ಹಾಗೂ ವಿವಿಧ ವಿಭಾಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

karavali_colg_deepa_13 karavali_colg_deepa_14 karavali_colg_deepa_15 karavali_colg_deepa_16 karavali_colg_deepa_17 karavali_colg_deepa_18 karavali_colg_deepa_19 karavali_colg_deepa_20 karavali_colg_deepa_21 karavali_colg_deepa_22 karavali_colg_deepa_23 karavali_colg_deepa_24 karavali_colg_deepa_25 karavali_colg_deepa_26 karavali_colg_deepa_27 karavali_colg_deepa_28 karavali_colg_deepa_29 karavali_colg_deepa_30 karavali_colg_deepa_31 karavali_colg_deepa_32 karavali_colg_deepa_33 karavali_colg_deepa_34 karavali_colg_deepa_35 karavali_colg_deepa_36 karavali_colg_deepa_37 karavali_colg_deepa_38 karavali_colg_deepa_39 karavali_colg_deepa_40 karavali_colg_deepa_41

karavali_colg_deepa_54

karavali_colg_deepa_42 karavali_colg_deepa_43 karavali_colg_deepa_44 karavali_colg_deepa_45 karavali_colg_deepa_46 karavali_colg_deepa_47 karavali_colg_deepa_48 karavali_colg_deepa_49 karavali_colg_deepa_50 karavali_colg_deepa_51 karavali_colg_deepa_52 karavali_colg_deepa_53 karavali_colg_deepa_55 karavali_colg_deepa_56 karavali_colg_deepa_57 karavali_colg_deepa_58

ದೂರದೂರಿನ ವಿದ್ಯಾರ್ಥಿಗಳಿಗೆ ದೀಪಾವಳಿ ಆಚರಿಸಲು ತಮ್ಮ ಊರಿಗೆ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನಲ್ಲಿ ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಿರುವುದು ಹೆಮ್ಮೆಯೆ ವಿಷಯ.ಬೇರೆ ಬೇರೆ ಊರುಗಳಿಂದ ಬಂದಂತಹ ವಿವಿಧ ಜಾತಿ, ಧರ್ಮಗಳ ವಿದ್ಯಾರ್ಥಿಗಳಿಗೆ ಇಂಥಹ ಒಂದು ಹಬ್ಬವನ್ನು ಆಚರಿಸಲು ಕಾಲೇಜು ಆವಕಾಶ ಮಾಡಿಕೊಟ್ಟಿದ್ದು, ವಿದ್ಯಾರ್ಥಿಗಳೆಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಸಾಮರಸ್ಯದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಲ್ಲಿ ದೀಪಾವಳಿ ಮಾತ್ರವಲ್ಲದೇ ಓಣಂ ಸಹಿತಾ ವಿವಿಧ ಧರ್ಮಗಳ ಹಬ್ಬವನ್ನು ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಆಚರಿಸುತ್ತಾರೆ.

ವಿದ್ಯಾರ್ಥಿಗಳಲ್ಲಿ ಯಾವೂದೇ ಜಾತಿ ಧರ್ಮದ ಬಗ್ಗೆ ದ್ವೇಷ ಬಾವನೆ ಬರಬಾರದೆಂಬ ಸದುದ್ದೇಶದಿಂದ ಇಂತಹ ಹಬ್ಬವನ್ನು ಒಟ್ಟಿಗೆ ಆಚರಿಸಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅಷ್ಟೇ, ಈ ರೀತಿಯ ಹಬ್ಬಗಳಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲವಾಗಿ ಬೆಳಗಿಸುವಂತಹ ಸಾಧನೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತ್ತು. ಭಾರತದ ಸಾಂಸ್ಕೃತಿಕ ವೈಭವವನ್ನು ಸಾರುವ ಭರತನಾಟ್ಯ, ಜಾನಪದ ನೃತ್ಯ, ಭಾರತೀಯ ಶೈಲಿಯ ಫ್ಯಾಶನ್ ಶೋ, ಕೋಲಾಟ, ರಾಜಸ್ಥಾನಿ ನೃತ್ಯ, ಗುಜಾರಾತಿ ನೃತ್ಯ, ಕಾಶ್ಮೀರ ಶೈಲಿಯ ನೃತ್ಯ, ಬೆಂಗಳಿ ನೃತ್ಯಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.ಬಳಿಕ ಕಾಲೇಜಿನ ಆವರಣದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಿದ ವಿದ್ಯಾರ್ಥಿಗಳೆಲ್ಲರೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Comments are closed.