ಉಡುಪಿ: ಕೃಷ್ಣನ ನಾಡು ಉಡುಪಿ ಹೊಸ ಸಂಘರ್ಷಕ್ಕೆ ಅಣಿಯಾಗಿದೆ. ಯುವ ಬಿಗೇಡ್ ಸಂಘಟನೆ ನಾಳೆ ( ಭಾನುವಾರ) ಕನಕ ನಡೆ ಆಯೋಜಿಸಿದೆ. ಇದಕ್ಕೆ ಪ್ರತಿಯಾಗಿ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ನಡೆ ಹಮ್ಮಿಕೊಂಡಿತ್ತು. ಭದ್ರತೆ ನೆಪದಲ್ಲಿ ಜಿಲ್ಲಾಡಳಿತ ಎರಡೂ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ. ಸದ್ಯದ ಬೆಳವಣಿಗೆಯಲ್ಲಿ ಸ್ವಾಭಿಮಾನಿ ನಡೆಯನ್ನು ಸದ್ಯ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆದ್ರೆ ನಾಳೆಯ ಕಾರ್ಯಕ್ರಮ ಕುತೂಹಲ ಮೂಡಿಸಿದೆ.

ಭಾನುವಾರ ಉಡುಪಿಯಲ್ಲಿ ನಡೆಯುವ ಕನಕ ನಡೆ ಹಾಗೂ ಸ್ವಾಭಿಮಾನಿ ನಡೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಕಾನೂನು ಸುವ್ಯವಸ್ಥೆಯ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅನುಮತಿ ನಿರಾಕರಿಸಿದ್ದಾರೆ. ಯುವ ಬ್ರಿಗೇಡ್ ಮಠದ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ದಲಿತ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಯುವ ಬ್ರಿಗೇಡ್ ನ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಸ್ವಾಭಿಮಾನಿ ನಡೆ ಮಾಡುವ ನಿರ್ಧಾರ ಮಾಡಿತ್ತು. ಈ ಕಾರಣದಿಂದ ನಾಳೆಯ ಕಾರ್ಯಕ್ರಮ ಕುತೂಹಲ ಮೂಡಿಸಿತ್ತು. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಜಿಲ್ಲಾಡಳಿತ ಅನುಮತಿ ನಿಡದಿರುವ ಬಗ್ಗೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಬದಲ್ಲಿ ಮಠದ ಒಳಗೆ ಸ್ವಚ್ಚತೆ ನಡೆಸಲು ಪೇಜಾವರ ಶ್ರೀಗಳು ಸೂಚನೆ ನೀಡಿದರು. ಸರ್ಕಾರದ ನಿರ್ಧಾರದಿಂದ ಮನಸ್ಸಿಗೆ ನೋವಾಗಿದೆ. ರಥೋತ್ಸವ ನಡೆಯುವ ಜಾಗದಲ್ಲೂ ಸ್ವಚ್ಚತೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶಿಸಿರುವುದ್ದು ಬೇಸರ ತಂದಿದೆ. ಸಂಘರ್ಷ ಬೇಡ ಕಾನೂನನ್ನು ಕೈಗೆತ್ತಿಕೊಂಡರೆ ನಾನು ಉಪವಾಸ ಕೂರುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ಅದ್ಯಕ್ಷ ಆರ್. ಅಶೋಕ್ ಸ್ವಾಭಿಮಾನಿ ನಡಿಗೆ ಜಾಥಾ ಸದ್ಯಕ್ಕೆ ಮುಂದೂಡಿದ್ದೇವೆ. ಸರಕಾರ ಸೂಚನೆ ಪಾಲಿಸುತ್ತೇವೆ. ಎರಡೂ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಮಠದ ಒಳಗೆ ಸ್ವಚ್ಚತಾ ಕಾರ್ಯಕ್ರಮ ನಡೆದರೂ ತಪ್ಪು. ಕೃಷ್ಣ ಮಠದ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದರೂ ಖಂಡಿಸುತ್ತೇವೆ ಎಂದರು.
ನಾಳೆ ಯುವಬ್ರಿಗೇಡ್ ಮಠದ ಒಳಾಂಗಣ ಮತ್ತು ಪಾರ್ಕಿಂಗ್ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದೆ. ಆದರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಗೊಂದಲ ಏರ್ಪಟ್ಟಿದೆ. ನಾಳೆಯ ಬೆಳವಣಿಗೆ ಕುತೂಹಲ ಮೂಡಿಸಿದೆ.
Comments are closed.