ಕರಾವಳಿ

ಕೊಲ್ಲೂರು: ರೋಡ್ ರಾಬರಿ ಮಾಡಿದ ಇಬ್ಬರು ಡಕಾಯಿತರು ಅರೆಸ್ಟ್, ಕಾರು ವಶ; ನಾಲ್ವರು ಪರಾರಿ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ಲೂರು –ಸಾಗರ ಹೆದ್ದಾರಿಯಲ್ಲಿ ಗುರುವಾರದಂದು ಬೆಳಿಗ್ಗೆ 09.45 ಗಂಟೆಗೆ ಉದಯ ಶೇರುಗಾರ ಎಂಬವರು ತೆರಳುತ್ತಿರುವ ದ್ವಿಚಕ್ರ ವಾಹನ ಅಡ್ಡಗಟ್ಟಿದ ಆರು ಮಂದಿ ಇದ್ದ ದರೋಡೆಕೋರರ ತಂಡ ಅವರ ಬೈಕ್ ಕೀ ಸಮೇತ ನಗದು ಹಾಗೂ ಮೊಬೈಲ್ ಕದ್ದು ಪರಾರಿಯಾದ ಘಟನೆ ನಡೆದಿದ್ದು ಒಂದೇ ದಿನದಲ್ಲಿ ಆರೋಪಿಗಳನ್ನು ಕೊಲ್ಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ಮೂಲದ ಮೋಹನ ಕುಮಾರ್ ಯಾನೆ ಮೋನಿ (27), ಬೆಂಗಳೂರು ಮೂಲದ ನಿವಾಸಿ ನರೇದ್ರ ಬಾಬು ಯಾನೆ ಬಾಬು (27) ಬಂಧಿತ ಆರೋಪಿಗಳಾಗಿದ್ದು ಉಳಿದ ಆರೋಪಿಗಳಾದ ಚಂದ್ರಕುಮಾರ ಯಾನೆ ಜಾಂಟಿ, ಜಾನಿ, ಸಿದ್ಧ, ನಾಗೇಶ ಹಾಗೂ ದರೋಡೆ ಕೃತ್ಯಕ್ಕೆ ಸಹಕರಿಸಿದವರನ್ನು ಅರೆಸ್ಟ್ ಮಾಡುವ ಬಗ್ಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಮೌಲ್ಯದಾ ಸಿಲ್ವರ್ ಬಣ್ಣದ ಇನ್ನೋವಾ ಕಾರು, ಕಬ್ಬಿಣದ ರಾಡು ಇತ್ಯಾಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.

kollur_road-robbary_arrest-2 kollur_road-robbary_arrest-1 kollur_road-robbary_arrest-3

ಘಟನೆ ಹಿನ್ನೆಲೆ: ಗುರುವಾರ ಕೊಲ್ಲೂರು ಕಡೆಯಿಂದ ದಳಿ ಕಡೆಗೆ ಹೋಗುತ್ತಿರುವಾಗ ಹೆದ್ದಾರಿಯ ದಳಿ ಎಂಬಲ್ಲಿ ಉದಯ ಶೇರುಗಾರ ಅವರ ಹಿಂಬದಿಯಿಂದ ಇನ್ನೋವಾ ವಾಹನದಲ್ಲಿ ಬಂದ 6 ಮಂದಿಯಿದ್ದ ದರೋಡೆಕೋರರು ಉದಯ ಶೇರುಗಾರರನ್ನು ಅಡ್ಡಹಾಕಿ ನಿಲ್ಲಿಸಿ ಅವರನ್ನು ಸೇರಿ ಕೈಯಿಂದ ಮುಖಕ್ಕೆ, ಮೂಗಿಗೆ ಬೆನ್ನಿಗೆ ಹೊಡೆದು, ನಂತರ ಕಬ್ಬಿಣದ ರಾಡಿನಿಂದ ಉದಯ ಶೇರುಗಾರ ಎಡಕಾಲಿಗೆ ಏಕಾಏಕಿಯಾಗಿ ಹೊಡೆದು, ಕಣ್ಣಿಗೆ ಮೆಣಸಿನ ಪುಡಿ ಎರಚಿ ದ್ವಿಚಕ್ರವಾಹನದ ಕೀಯನ್ನು, ಅಂಗಿಯ ಕಿಸೆಯಲ್ಲಿದ್ದ ಮೊಬೈಲ್ 8 ಸಾವಿರ ರೂ. ಮೌಲ್ಯದ ಫೋನನ್ನು ಮತ್ತು ಕಿಸೆಯಲ್ಲಿದ್ದ ನಗದು 1000/ ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉದಯ್ ಅವರು ಕೊಲ್ಲೂರು ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಆರೋಪಿತರ ಖಚಿತ ಮಾಹಿತಿಯನ್ನು ಪಡೆದ ಕೊಲ್ಲೂರು ಠಾಣಾ ಪಿ.ಎಸ್. ಐ ಮತ್ತು ಸಿಬ್ಬಂದಿರವರು ಆರೋಪಿಗಳನ್ನು ಬೈಂದೂರಿನ ಅರೆಶಿರೂರಿನಲ್ಲಿ ಬಂಧಿಸಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ತಂಡ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಬಾಲಕೃಷ್ಣ ಕೆ.ಟಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನಿರ್ದೇಶನದಂತೆ ಕುಂದಾಪುರ ಡಿವೈಎಸ್ಪಿ ಪ್ರವೀಣ್ ಹೆಚ್ ನಾಯಕ್ ಮತ್ತು ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣಾ ಪಿಎಸ್ಐ ಶೇಖರ, ಮತ್ತು ಸಿಬ್ಬಂದಿಗಳಾದ ಅಶೋಕ್ ಕುಮಾರ್, ನವೀನ ಕುಮಾರ್, ನವೀನ, ನಾಗರಾಜ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.