ಗಲ್ಫ್

ದುಬೈಯಲ್ಲಿ ನವೆಂಬರ್ 25 ರಂದು KSCCಯಿಂದ “Ahlan UAE” 2016 ಸಾಂಸ್ಕೃತಿಕ ಕಾರ್ಯಕ್ರಮ

Pinterest LinkedIn Tumblr

dub

ದುಬೈ: ಇಲ್ಲಿನ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್(KSCC ) ಯುಎಇ ಇವರ ಆಶ್ರಯದಲ್ಲಿ ನವೆಂಬರ್ 25 ರಂದು ದುಬೈಯ ಅಲ್ ಕಿಸೈಸ್ ಕ್ರೆಸೆಂಟ್ ಇಂಗ್ಲೀಷ್  ಸ್ಕೂಲ್ ನಲ್ಲಿ “Ahlan UAE” 2016 ಕಾರ್ಯಕ್ರಮ ನಡೆಯಲಿದೆ.

   ಅನಿವಾಸಿ ಭಾರತೀಯ ಕುಟುಂಬಗಳಿಗೋಸ್ಕರ    “Ahlan UAE” 2016, “let’s make memories together “ಎಂಬ ಶೀರ್ಷಿಕೆಯಲ್ಲಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚಿತ್ರ ಬಿಡಿಸುವಿಕೆ , ಗಾಯನ ಸ್ಪರ್ಧೆಗಳು,ಸ್ವಾದಿಷ್ಟ ಅಡುಗೆ, ಚದುರಂಗ, ಛದ್ಮವೇಷ, ಮದುರಂಗಿ ಹಾಗು ಇನ್ನಿತರ ಹಲವಾರು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ .

   ಕಾರ್ಯಕ್ರಮದಲ್ಲಿ ಭಾರತದ ಹಲವು ರಾಜ್ಯಗಳ ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಯು ಎಲ್ಲರ ಗಮನ ಸೆಳೆಯಲಿದ್ದು ಇತಿಹಾಸವನ್ನು ನಿರ್ಮಿಸಲಿದೆ.    ಈ ಕಾರ್ಯಕ್ರಮದ ಲಾಂಛನ ಮತ್ತು ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಮಾಜಿಕ ತಾಣಗಳಾದ ಫೇಸ್ಬುಕ್ , ವಾಟ್ಸಾಪ್ ಮುಖಾಂತರ ನೊಂದಾವಣೆ ಮಾಡಿಕೊಳ್ಳಬಹುದು ಅಲ್ಲದೇ ದೂರವಾಣಿ ಕರೆಯ  ಮುಖಾಂತರವೂ  ತಮ್ಮ ನೋಂದಾವಣಿಯನ್ನು  ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಥಮವಾಗಿ ನೊಂದಾವಣೆ ಮಾಡಿಕೊಂಡ ಕುಟುಂಬಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು.
ದೂರವಾಣಿ  ಸಂಖ್ಯೆ:    055 546 5224, 055 534 8230

ಚಿಣ್ಣರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಪುಟಾಣಿಗಳ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಫ್ರಾರಂಭ ವಾಗಿದ್ದು ಭಾಗವಹಿಸುವ ಪುಟಾಣಿಗಳ 2  ನಿಮಿಷಗಳ ಗಾಯನದ(ದೇಶಭಕ್ತಿ ಗೀತೆ) ವೀಡಿಯೋ ರೆಕಾರ್ಡಿಂಗನ್ನು ವಾಟ್ಸಾಪ್ ಸಂಖ್ಯೆ  :  0555971237  ಗೆ ಕಳುಹಿಸಬಹುದೆಂದೂ  ಅಂತಿಮ ಹಂತದ ಸ್ಪರ್ಧಿಗಳನ್ನು ಪರಿಣತ  ತೀರ್ಪುಗಾರರು  ಆಯ್ಕೆ ಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.