ಗಲ್ಫ್

ಅಮೆರಿಕಾದಿಂದ ಭಾರತಕ್ಕೆ ಹೋಗುತ್ತಿದ್ದ ವೇಳೆ ದುಬೈಯಲ್ಲಿ ಸಾವನ್ನಪ್ಪಿದ್ದ ಗೋಪಾಲ ಕೃಷ್ಣರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸುವಲ್ಲಿ ಸಹಾಯಹಸ್ತ ನೀಡಿದ KSCC

Pinterest LinkedIn Tumblr

desayi

ದುಬೈ: ಅಮೆರಿಕಾದಿಂದ ದುಬೈ ಮೂಲಕ ಭಾರತಕ್ಕೆ ತೆರಳುವ ಸಂದರ್ಭದಲ್ಲಿ ಮೃತಪಟ್ಟಿದ್ದ ಕರ್ನಾಟಕದ ಸಿಂಧಗಿಯವರಾದ ಗೋಪಾಲ ಕೃಷ್ಣ ದೇಸಾಯಿ ಅವರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಿ ಕೊಡುವ ಮೂಲಕ ದುಬೈಯ(ಯುಎಇ) ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ (KSCC) ಮಹತ್ತರ ಕಾರ್ಯವನ್ನು ಮಾಡಿದೆ.

ಪತ್ನಿ ಸುಧಾರೊಂದಿಗೆ ಅಮೇರಿಕಾಕ್ಕೆ ತೆರಳಿದ್ದ ಗೋಪಾಲ ಕೃಷ್ಣ ದೇಸಾಯಿ ಅವರು ಅಲ್ಲಿ ತನ್ನ ಮಗಳೊಂದಿಗೆ ಸಂತಸದ ದಿನಗಳನ್ನು ಕಳೆದು ಊರಿಗೆ ಹೊರಟಿದ್ದರು. ಭಾರತಕ್ಕೆ ದುಬೈ ಮೂಲಕ ತೆರಳುತ್ತಿದ್ದ ವೇಳೆ ಗೋಪಾಲ ಕೃಷ್ಣ ದೇಸಾಯಿ ಹೃದಾಯಾಘಾತದಿಂದ ದುಬೈಯಲ್ಲಿ ನಿಧನರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ನಾರಾಯಣ ರಾವ್ ರವರ ಮಗನಾಗಿರುವ ವೃತ್ತಿಯಲ್ಲಿ ವಕೀಲರಾಗಿದ್ದ ದೇಸಾಯಿ ಕರ್ನಾಟಕದ ಸಿಂಧಗಿಯವರು.

ಮೃತ ದೇಹವನ್ನು ಸ್ವದೇಶಕ್ಕೆ ಕಳುಹಿಸಲು ಅನೇಕ ರಿವಾಜುಗಳಿರುವುದರಿಂದ ಹಿತೈಷಿಯೊಬ್ಬರ ಮೂಲಕ ಕೆ.ಎಸ್.ಸಿ.ಸಿ ಯನ್ನು ಸಂಪರ್ಕಿಸಿದ ಕುಟುಂಬ ಈ ಸಂಬಂಧ ಸಹಾಯಕ್ಕಾಗಿ ಯಾಚಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ಸಂಘಟನೆ ಸದಸ್ಯರು ಅತ್ಯಂತ ಕಡಿಮೆ ಅವಧಿಯಲ್ಲೇ ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸುವ ಎಲ್ಲಾ ಕ್ರಮಗಳನ್ನು ಕೈಗೊಂಡರು. ಮೃತ ಗೋಪಾಲ ಕೃಷ್ಣ ದೇಸಾಯಿ ಮಗ ಗಿರೀಶ್ ದೇಸಾಯಿ, ಮಗಳು ಜಯದೇವ ದೇಸಾಯಿ ಸಹಿತ ಹಲವರನ್ನು ಅಗಲಿದ್ದಾರೆ.

Comments are closed.