ಗಲ್ಫ್

ಅಬುಧಾಬಿಯಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟ ಬೆಂಗಳೂರು ಮೂಲದ ಬಾಲಕಿಯ ಮೃತದೇಹವನ್ನು ಊರಿಗೆ ಕಳುಹಿಸಲು EIFF ನೆರವು

Pinterest LinkedIn Tumblr

dd

ಅಬುಧಾಬಿ: ಇಲ್ಲಿನ ಮದೀನತ್ (ಬೆದಾ) ಝಾಯಿದ್ ಪಶ್ಚಿಮ ಪ್ರದೇಶದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟ ಬೆಂಗಳೂರು ಮೂಲದ ಬಾಲಕಿಯ ಮೃತದೇಹವನ್ನು ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಪೋರಂ ಹಾಗೂ ಯುಎಇ ಸರಕಾರ ಹಾಗೂ ಅಬುಧಾಬಿ ಭಾರತೀಯ ದೂತಾವಾಸದ ಸಹಕಾರದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು.

ಬೆಂಗಳೂರಿನ ಬಸವನ ಗುಡಿ ನಿವಾಸಿಗಳಾದ ಮಕ್ಸೂದ್ ಅಹ್ಮದ್ ಹಾಗೂ ತಯ್ಯಬಾ ಝುಬೈರ್ ದಂಪತಿಯ ಪುತ್ರಿ ತಾಹಾ ಖಾನ್ (9) ಅ.14ರಂದು ತನ್ನ ಹೆತ್ತವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಹಾ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದರು. ಮೃತ ಬಾಲಕಿಯ ಮೃತದೇಹವನ್ನು ಭಾರತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫೋರಂ ಸದಸ್ಯರು ಯುಎಇ ಸಂಚಾರಿ ಇಲಾಖೆಯ ದಸ್ತಾವೇಜಿನೊಂದಿಗೆ ಭಾರತೀಯ ದೂತಾವಾಸ ಅಧಿಕಾರಿ ಹಾಗೂ ಕಾರ್ಗೊ ಸೇವಾ ವಿಭಾಗದೊಂದಿಗೆ ಮಾತುಕತೆ ನಡೆಸಿದ್ದು. ಅ.15ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು.

ಭಾರತೀಯ ದೂತಾವಾಸದ ಸಹಕಾರ ಮತ್ತು ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫೋರಂನ ಕಾರ್ಯಕರ್ತರಿಗೆ ಮೃತ ಬಾಲಕಿಯ ಕುಟುಂಬ ಕೃತಜ್ಞತೆಗಳನ್ನು ಸಲ್ಲಿಸಿದೆ.

Comments are closed.