ರಾಷ್ಟ್ರೀಯ

ಎಟಿಎಂ ಕಾರ್ಡ್’ಗಳ ಗ್ರಾಹಕರೇ ಹೀಗೆ ಮಾಡಿ

Pinterest LinkedIn Tumblr

atmcardನವದೆಹಲಿ(ಅ.21): ಎಟಿಎಂ ಕಾರ್ಡ್ ಬಳಕೆದಾರರೇ ಎಚ್ಚರ, ಈಗಾಗಲೇ 32 ಲಕ್ಷಕ್ಕೂ ಹೆಚ್ಚು ಎಟಿಎಂ ಕಾರ್ಡ್ಗಳ ಪಾಸ್ವರ್ಡ್ ಕಳ್ಳತನವಾಗಿದೆ ಇವುಗಳಲ್ಲಿ ವೀಸಾ, ಮಾಸ್ಟರ್ ಕಾರ್ಡ್ಗಳ, ರುಪೇ ಮೊದಲಾದ ಕಾರ್ಡ್ಗಳ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್’ಗಳ 32 ಲಕ್ಷ ಡೆಬಿಟ್ ಕಾರ್ಡ್ಗಳನ್ನು ಸ್ಥಗಿತಗೊಳಿಸಿದ್ದು, ಕಾರ್ಡ್’ಗಳ ಪಾಸ್ವರ್ಡ್ ಬದಲಾಯಿಸಿಕೊಳ್ಳಲು ಬ್ಯಾಂಕ್ ತನ್ನ ಗ್ರಾಹರಿಗೆ ಸೂಚಿಸಿದೆ.
ಯೆಸ್ ಬ್ಯಾಂಕ್ನ ಹಿಟಾಚಿ ಪೇಮೆಂಟ್ ಸರ್ವಿಸಸ್’ನಲ್ಲಿ ಕಾಣಿಸಿದ ಲೋಪದಿಂದಾಗಿ ಮಾಲ್ವೇರ್ ಸಾಫ್ಟ್ವೇರ್ ಬಳಿಸಿ ಖದೀಮರು ಈ ಮಾಹಿತಿ ಕದ್ದಿದ್ದು, ಅಂ.ರಾ. ಡೆಬಿಟ್‌ ಕಾರ್ಡ್‌ಗಳಿಂದ ಚೀನಾದಲ್ಲಿ ಅನುಮಾನಾಸ್ಪದ ವಹಿವಾಟು ನಡೆಸಲಾಗುತ್ತಿದೆ. ಮಾಹಿತಿ ಸೋರಿಕೆಯಾದ ಡೆಬಿಟ್ ಕಾರ್ಡ್’ಗಳನ್ನು ಬದಲಿಸಲು ಕೂಡಾ ಬ್ಯಾಂಕ್’ಗಳು ಮುಂದಾಗಿವೆ.
ಎಟಿಎಂ ಬಳಕೆದಾರರು ಏನು ಮಾಡಬೇಕು?
-ನಿಮ್ಮ ನಿಮ್ಮ ಡೆಬಿಟ್ ಕಾರ್ಡ್ ಪಾಸ್’ವರ್ಡ್’ಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ
-ನಿಮ್ಮ ಬ್ಯಾಂಕ್’ನ ಎಟಿಎಂನಿಂದಷ್ಟೇ ಹಣ ಡ್ರಾ ಮಾಡಿಕೊಳ್ಳಿ
-ಬೇರೆ ಬ್ಯಾಂಕ್’ಗಳ ಎಟಿಎಂಗಳನ್ನು ತಾತ್ಕಾಲಿಕವಾಗಿ ಬಳಸಬೇಡಿ
-ತಕ್ಷಣ ಬ್ಯಾಂಕ್’ನವರನ್ನು ಸಂಪರ್ಕಿಸಿ, ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಳ್ಳಿ
-ನಿಮ್ಮ ನಿಮ್ಮ ಡೆಬಿಟ್ ಕಾರ್ಡ್ ಪಾಸ್ವರ್ಡ್ಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ
-ಐಸಿಐಸಿಐ, ಯೆಸ್ ಬ್ಯಾಂಕ್, ಹೆಚ್ಡಿಎಫ್ಸಿ ಗ್ರಾಹಕರು ಎಚ್ಚರದಿಂದಿರಿ
-ತಮ್ಮ ಖಾತೆಯಲ್ಲಿ ತಮಗರಿವಿಲ್ಲದಂತೆ ವಹಿವಾಟು ನಡೆದಿರುವುದು ಗೊತ್ತಾದ ತಕ್ಷಣವೇ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತರಬೇಕು. ಅಗತ್ಯಬಿದ್ದರೆ ಲಿಖಿತ ದೂರು ಸಲ್ಲಿಸಬೇಕು.
– ಭಾರಿ ಪ್ರಮಾಣದಲ್ಲಿ ಸುರಕ್ಷತೆ ಛೇದವಾದಾಗ ಒಂದು ಬಾರಿ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಎಟಿಎಂನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು.

Comments are closed.