ಕರಾವಳಿ

ಕುಂದಾಪುರದಲ್ಲಿ ‘ಡೀಲ್ ರಾಣಿ’; ಇದೊಂದು ವಿಭಿನ್ನ ಪ್ರೇಮ ಕಹಾನಿ..!

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಶಾರ್ಟ್ ಮೂವಿಗಳು ಸಿಕ್ಕಾಪಟ್ಟೆ ಟ್ರೆಂಡ್ ಮೂಡಿಸುತ್ತಿದೆ. ಸಿನೆಮಾ ಬಗ್ಗೆ ಆಸಕ್ತಿ ಹೊಂದಿರುವ ಸಾಪ್ಟ್‌ವೇರ್ ಉದ್ಯೋಗಿಯೊಬ್ಬರು ಪ್ರಥಮ ಪ್ರಯೋಗವಾಗಿ ತಮ್ಮದೇ ನಿರ್ದೇಶನದ ಒಂದು ಶಾರ್ಟ್ ಮೂವಿ ರೆಡಿ ಮಾಡಿದ್ದಾರೆ. ‘ಡೀಲ್ ರಾಣಿ’ ಹೆಸರಿನ ಈ ಶಾರ್ಟ್ ಮೂವಿ ಬಗೆಗಿನ ಝಲಕ್ ಇದು.

kundapura_deal-rani_short-movie-1

(ನಿರ್ದೇಶಕ ಮುತ್ತಾರಿಫ್ ತೆಕ್ಕಟ್ಟೆ)

kundapura_deal-rani_short-movie-2

ಈ ಶಾರ್ಟ್ ಮೂವಿ ನಿರ್ದೇಶಕರ ಹೆಸರು ಮುತ್ತಾರಿಫ್ ತೆಕ್ಕಟ್ಟೆ. ವಿದ್ಯಾಭ್ಯಾಸದ ಬಳಿಕ ಸಾಪ್ಟ್ ವೇರ್ ಉದ್ಯೋಗಿಯಾಗಿರುವ ಇವರಿಗೆ ಬಾಲ್ಯದಿಂದಲೂ ಸಿನೆಮಾ ಎಂದರೇ ಅಚ್ಚುಮೆಚ್ಚು. ತನ್ನ ವೃತ್ತಿಯ ಜೊತೆಗೆ ಸಿನೆಮಾ ಕ್ಷೇತ್ರವನ್ನು ಪ್ರವೃತ್ತಿಯಾಗಿ ಆರಿಸಿಕೊಂಡ ಅವರು ಡೀಲ್ ಎನ್ನುವ ಚಿತ್ರಕ್ಕೆ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದ್ರು. ತಾನೇ ಒಂದು ಸಿನೆಮಾ ನಿರ್ದೇಶನ ಮಾಡಬೇಕೆಂಬ ಹಂಬಲ ಇವರದ್ದು. ಆದರೇ ದೊಡ್ಡ ಸಿನೆಮಾ ಮಾಡುವ ಮೊದಲು ಒಂದು ಅನುಭವಿರಲಿ ಎನ್ನುವ ಆಲೋಚನೆ ಇವರ ತಲೆ ಹೊಕ್ಕಿತ್ತು. ಆಗಲೇ ಇವರಿಗೆ ಅನಿಸಿದ್ದು ‘ಡೀಲ್ ರಾಣಿ’ ಎಂಬ ಹೆಸರಿನ ಶಾರ್ಟ್ ಮೂವಿ ಮಾಡಿದ್ರೇ ಹೇಗೆ ಎಂಬುದು. ಆಲೋಚನೆ ತಕ್ಕಂತೆಯೇ ಸ್ಕ್ರಿಪ್ಟ್ ಕೂಡ ರೆಡಿ ಮಾಡ್ತಾರೆ. ತೆಕ್ಕಟ್ಟೆ ಭಾಗದ ಬಿಜೆಪಿ ಕಾರ್ಯಕರ್ತೆಯಾಗಿರುವ ದಿಲ್‌ಶಾದ್ ಅವರ ಬಳಿ ನಿರ್ಮಾಣದ ಬಗ್ಗೆ ಮಾತುಕತೆಯನ್ನು ಮಾಡುತ್ತಾರೆ. ಅವರು ಈ ಶಾರ್ಟ್ ಮೂವಿಗೆ ಹಣ ಹಾಕಲು ಎಸ್ ಎಂದಿದ್ದೇ ತಡ ಶೂಟಿಂಗ್ ಆರಂಭಿಸಿಯೇ ಬಿಡುತ್ತಾರೆ.

kundapura_deal-rani_short-movie-6 kundapura_deal-rani_short-movie-4

‘ಡೀಲ್ ರಾಣಿ’. ಹೌದು…ಹೆಸರೇ ಹೇಳುವ ಹಾಗೆ ಹುಡುಗಿಯೊಬ್ಬಳ ಕಮಿಟ್‌ಮೆಂಟ್ ಈ ಕಥೆಯ ಬಹುಮುಖ್ಯ ಕಥಾಹಂದರ. ಆಕೆ ತಾನು ಪ್ರೀತಿಸಿದ ಯುವಕನಿಗೆ ನೀಡುವ ಮಾತು, ಅದೇ ಗಳಿಗೆಯಲ್ಲಿ ಸಂಭವಿಸುವ ಅನಾಹುತದಿಂದಾಗಿ ಆಕೆ ದೇವರಿಗೆ ಹೊತ್ತುಕೊಳ್ಳುವ ಹರಕೆ. ಇವೆರಡನ್ನು ಒಂದೇ ಕಮಿಟ್‌ಮೆಂಟ್ ಮೂಲಕ ತೀರಿಸುವ ಆಕೆಯ ಬುದ್ದಿವಂತಿಕೆಯೇ ಈ ಚಿತ್ರದ ಹೈಲೆಟ್ಸ್. ಸುಮರು ೧೦ ನಿಮಿಷವಿರುವ ಈ ಕಿರುಚಿತ್ರದಲ್ಲಿ ನಿಷ್ಕಲ್ಮಷ ಪ್ರೀತಿ, ದೇವರ ಬಗೆಗಿನ ನಂಬಿಕೆ, ಎಂತಹಾ ಕಷ್ಟ ಬಂದರೂ ತಾಳ್ಮೆ ಹಾಗೂ ಸಹನೆಯಿಂದ ನಡೆದುಕೊಂಡು ಪರಿಹಾರ ಕಂಡುಕೊಂಡ್ರೇ ಕಷ್ಟ ಮಂಜಿನಂತೆ ಕರಗುತ್ತದೆ ಎಂಬುದನ್ನು ಶಾರ್ಟ್ ಆಂಡ್ ಸ್ವೀಟ್ ಆಗಿ ಚಿತ್ರಿಸಲಾಗಿದೆ. ಇನ್ನು ಪ್ರೇಮಿಗಳು ಯಾವ ಕಷ್ಟಕ್ಕೂ ಅಂಜದೇ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬಾರದು ಎಲ್ಲದಕ್ಕೂ ಒಂದು ಸೊಲ್ಯೂಷನ್ ಇದೆ ಎನ್ನುವ ಮೆಸ್ಸೇಜ್ ಕೂಡ ಇದರಲ್ಲಿದೆ.

kundapura_deal-rani_short-movie-5 kundapura_deal-rani_short-movie-7

ಕೋಟ ಶ್ರೀ ಅಮೃಥೇಶ್ವರೀ ದೇವಸ್ಥಾನದಲ್ಲಿ ಈ ಕಿರುಚಿತ್ರದ ಮುಹೂರ್ತ ನಡೆದಿದ್ದಲ್ಲದೇ ಶೇಖಡಾ ೩೦ರಷ್ಟು ಚಿತ್ರೀಕರಣ ದೇವಸ್ಥಾನದಲ್ಲಿ ನಡೆಸಲಾಗಿತ್ತು. ಅಲ್ಲದೇ ಕುಂದಾಪುರದ ಬೀಜಾಡಿ ಕಡಲ ತೀರ, ಆನೆಗುಡ್ಡೆ ದೇವಸ್ಥಾನದ ಹೊರಾಂಗಣ ಪ್ರದೆಶ, ತೆಕ್ಕಟ್ಟೆ ಪರಿಸರದಲ್ಲಿ ಈ ತಂಡ ಎರಡೇ ದಿನದಲ್ಲಿ ಶೂಟಿಂಗ್ ಫಿನಿಶ್ ಮಾಡಿದೆ. ಕಥಾ ನಾಯಕಿಯಾಗಿ ಕುಂದಾಪುರದ ಮೂಡುಗೋಪಾಡಿಯ ರಕ್ಷಾ, ಕಥಾ ನಾಯಕನಾಗಿ ಬೆಂಗಳೂರಿನ ಆಯುರ್ ಸ್ವಾಮೀ ಬಣ್ಣ ಹಚ್ಚಿದ್ದು ಸ್ಥಳೀಯ ಕೆಲವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಜಯರಾಂ ಆಲೂರು ಕ್ಯಾಮೆರಾ ಕೈಚಳಕ ಈ ಶಾರ್ಟ್ ಮೂವಿಯಲ್ಲಿದೆ. ಮುತ್ತಾರಿಫ್ ತೆಕ್ಕಟ್ಟೆ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದಿಲ್‌ಶಾದ್ ಅವರು ನಿರ್ಮಾಪಕರಾಗಿದ್ದಾರೆ.

ಮ್ಯೂಸಿಕ್ ಸಮೇತ ಕೆಲವೊಂದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದ ಬಳಿಕ ಅಂದರೇ ದೀಪಾವಳಿಯ ಹೊತ್ತಿಗೆ ಡೀಲ್ ರಾಣಿ ಕಿರುಚಿತ್ರ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ ಇವರು. ಇವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎನ್ನುವುದು ನಮ್ಮ ಹಾರೈಕೆ.
——————————-
ವರದಿ- ಯೋಗೀಶ್ ಕುಂಭಾಸಿ

Comments are closed.