ಕರಾವಳಿ

ಕಾನೂನು ಬಾಹಿರ ಜುಗಾರಿ ಹಾಗೂ ವಿಡಿಯೋ ಗೇಮ್ ಕ್ಲಬ್‌ಗೆ ದಾಳಿ : 40 ಮಂದಿಯ ಬಂಧನ :ಸೊತ್ತು ವಶ

Pinterest LinkedIn Tumblr

arrest_crime_news

ಮಂಗಳೂರು, ಅ.19: ಕಾವೂರು ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಗರದಲ್ಲಿ ಕಾನೂನು ಬಾಹಿರವಾಗಿ ವಿಡಿಯೋ ಗೇಮ್ ಆಡುತ್ತಿದ್ದ 3 ರಿಕ್ರೇಶನ್ ಕ್ಲಬ್ ಗಳಿಗೆ ದಾಳಿ ನಡೆಸಿ 40 ಮಂದಿಯನ್ನು ಬಂಧಿಸಿದ್ದಾರೆ.

ಕೂಳೂರು ಹಾಗೂ ಕಾವೂರಿನಲ್ಲಿ ಅಕ್ರಮವಾಗಿ ಜುಗಾರಿ ಹಾಗೂ ವಿಡಿಯೋ ಗೇಮ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾವೂರು ಠಾಣಾ ನಿರೀಕ್ಷಕ ನಟರಾಜ್ ನೇತೃತ್ವದಲ್ಲಿ ಕಾವೂರು ಪೊಲೀಸರು ಈ ದಾಳಿ ನಡೆಸಿದ್ದಾರೆ. ಬಂಧಿತರಿಂದ ವೀಡಿಯೋ ಗೇಮ್‌ಗೆ ಬಳಸುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೂಳೂರಿನ ರಿಕ್ರೇಶನ್ ಕ್ಲಬ್ಗೆ ದಾಳಿ ಮಾಡಿ ಆರೋಪಿಗಳಾದ ಉಮರ್, ಮುಹಮ್ಮದ್ ಆಸಿಫ್, ಅಬ್ದುಲ್ ಖಾದರ್ ಹಾಗೂ ಹರೀಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಕಾವೂರಿನ ರಿಕ್ರೇಶನ್ ಕ್ಲಬ್ನಿಂದ ನವೀನ್, ಲೋಕಯ್ಯ, ಅಂತೋನಿ, ಕೆವಿನ್ ಫೆರ್ನಾಂಡೀಸ್, ಮಾಧವ, ದಿನೇಶ್, ಶ್ರೀನಿವಾಸ, ಶಂಕರ, ನೀಲ್ ಡಿಸೋಜ, ಆದರ್ಶ್ ಎಂಬವರನ್ನು ಬಂಧಿಸಲಾಗಿದೆ.

ಕಾವೂರಿನ ಇನ್ನೊಂದು ರಿಕ್ರೇಶನ್ ಕ್ಲ್ಬ್ ಗೆ ದಾಳಿ ಮಾಡಿ ಪ್ರಶಾಂತ್, ರಶೀದ್, ರಕ್ಷಿತ್, ಫಾರೂಕ್, ಅನ್ಸಾರ್, ನಾಗರಾಜ್, ಮುಹಮ್ಮದ್ ಅಸ್ಬಾಕ್, ದಾವೂದ್, ರಮೇಶ್, ರಾಹುಲ್, ಕೇಶವ, ಶರೀಫ್, ರಿಯಾಝ್, ಮುಹಮ್ಮದ್ ಸೈುಲ್ಲಾ, ಸುಧೀರ್, ಉಮೇಶ್, ರಾಕೇಶ್ ಶೆಟ್ಟಿ, ರಮೇಶ್, ಹರೀಶ, ರಿಫಾಝ್, ಅಬ್ದುಲ್ ಖಾದರ್, ಶಿವಾನಂದ, ದಯಾನಂದ, ಕಿಶೋರ್, ಲಕ್ಷ್ಮಣ್, ರವೀಂದ್ರ ಎಂಬವರನ್ನು ಬಂಧಿಸಲಾಗಿದೆ.

Comments are closed.