ಕರಾವಳಿ

ಮತಾಂತರ ಯತ್ನ: ಇಬ್ಬರು ಮಹಿಳೆಯರು ಪೊಲೀಸ್ ವಶಕ್ಕೆ

Pinterest LinkedIn Tumblr

ಕುಂದಾಪುರ: ಮನೆಯೊಂದಕ್ಕೆ ಬಂದು ಅಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಾ ಮತಾಂತರಕ್ಕೆ ಯತ್ನಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ಮಾಬುಕಳ ಮೂಲದ ಪ್ಲೇಮಿ ಮತ್ತು ಡಯಾನಾ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

kundapura_natantara_yatna-3 kundapura_natantara_yatna-2 kundapura_natantara_yatna-1

ಕಳೆದ ಎರಡು ವರ್ಷಗಳಿಂದಲೂ ಕೋಟೇಶ್ವರದ ಮನೆಯೊಂದಕ್ಕೆ ಬರುತ್ತಿದ್ದ ಇವರು ಆ ಮನೆಯವರಿಗೆ ತಮ್ಮ ಧರ್ಮದ ಬಗ್ಗೆ ಹೇಳುತ್ತಾ ಅವರನ್ನು ತಮ್ಮ ಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಸ್ಥಳಿಯ ಹಿಂದೂಪರ ಸಂಘಟನೆಯವರಿಗೆ ಮಾಹಿತಿ ತಿಳಿದಿದ್ದು ಮಂಗಳವಾರ ಮಧ್ಯಾಹ್ನ ಆ ಮನೆಗೆ ತೆರಳಿದಾಗ ಇಬ್ಬರು ಮಹಿಳೆಯರು ಮತಾಂತರ ಯತ್ನ ನಡೆಸುತ್ತಿದ್ದರೆನ್ನಲಾಗಿದೆ. ಸಂಘಟನೆ ಕಾರ್ಯಕರ್ತರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ಸಂದರ್ಭ ಹಿಂದೂಪರ ಸಂಘಟನೆ ಮುಖಂಡರಾದ ಶಂಕರ ಅಂಕದಕಟ್ಟೆ, ಸುರೇಂದ್ರ ಮಾರ್ಕೋಡು ಮೊದಲಾದವರು ಇದ್ದರು.

Comments are closed.