ಕರಾವಳಿ

ಆನಗಳ್ಳಿಯನ್ನು ಬಿಹಾರಕ್ಕೆ ಹೋಲಿಸಿದ ರಂಗಕರ್ಮಿ ಸುರೇಶ್ ಆನಗಳ್ಳಿ ಕ್ಷಮೆಯಾಚಿಸಲು ಗ್ರಾಮಸ್ಥರ ಆಗ್ರಹ

Pinterest LinkedIn Tumblr

ಉಡುಪಿ: ಆನಗಳ್ಳಿ ಭಾಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗಳನ್ನು ಗಮನಿಸಿದರೇ ಆನಗಳ್ಳಿ ಬಿಹಾರಿನಂತೆ ಕಾಣಿಸುತ್ತದೆ ಎನ್ನುವ ಹೇಳಿಕೆ ನೀಡಿದ್ದ ರಂಗಕರ್ಮಿ ಸುರೇಶ್ ಆನಗಳ್ಳಿ ಮಾತನ್ನು ಆನಗಳ್ಳಿ ಗ್ರಾಮಸ್ಥರು ಖಂಡಿಸಿದ್ದು ಈ ಕೂಡಲೇ ಸುರೇಶ್ ಆನಗಳ್ಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹ ಮಾಡಿದ್ದಾರೆ.

aanagalli_people_preemeet-1 aanagalli_people_preemeet-5

ಕುಂದಾಪುರದಲ್ಲಿ ಆನಗಳ್ಳಿ ಗ್ರಾಮಸ್ಥರು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ್ದು ಸುರೇಶ್ ಆನಗಳ್ಳಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆನಗಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಎಲ್ಲರೂ ಸೌಜನ್ಯಯುತವಾಗಿ ಬದುಕುತ್ತಿದ್ದು ಯಾವುದೇ ಸಮಸ್ಯೆಗಳು ಇಲ್ಲ. ಆದರೇ ಸುರೇಶ್ ಆನಗಳ್ಳಿ ಅವರ ಸಹೋದರ ಮೇಲೆ ನಡೆದ ವೈಯಕ್ತಿಕ ಹಲ್ಲೆಯನ್ನು ಮುಂದಿಟ್ಟುಕೊಂಡು ಅವರು ಇದನೂ ಗೂಂಡಾ ಗ್ರಾಮ ಮತ್ತು ಬಿಹಾರ್ ಎಂಬ ಉಲ್ಲೇಖ ಮಾಡಿ ಇಡಿ ಊರಿನ ಜನರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆಂದು ಆನಗಳ್ಳಿ ಗ್ರಾಮಪಂಚಾಯತ್ ಸದಸ್ಯ ಪ್ರಭಾಕರ ಹಾಗೂ ಮಾಜಿ ತಾಲೂಕುಪಂಚಾಯತ್ ಅಧ್ಯಕ್ಷ ಹಾಗೂ ಆನಗಳ್ಳಿ ಗ್ರಾಮಸ್ಥ ಭಾಸ್ಕರ ಬಿಲ್ಲವ ಹೇಳಿದರು.

aanagalli_people_preemeet-4

ಸುರೇಶ್ ಆನಗಳ್ಳಿಯ ಹೇಳಿಕೆಯನ್ನು ಗ್ರಾಮಸ್ಥರೆಲ್ಲರೂ ಬಲವಾಗಿ ಖಂಡಿಸುತ್ತಿದ್ದು ಜನಪ್ರತಿನಿಧಿಗಳು ಹಾಗೂ ಊರಿನ ಹಿರಿಯರ ಸಭೆ ಕರೆದು ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ನಿರಣಯ ಕೈಗೊಳ್ಳಲಿದ್ದೇವೆ. ಅಗತ್ಯವಿದ್ದಲ್ಲಿ ಹೇಳಿಕೆ ನೀಡಿದ ಸುರೇಶ್ ಆನಗಳ್ಳಿ ವಿರುದ್ಧ ಹೋರಾಟಕ್ಕೂ ಸಿದ್ಧ. ಇಂತಹ ಅಸಂಬದ್ದ ಹೇಳಿಕೆ ನೀಡಿದ ಅವರು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳು ನೀಡಬಾರದು ಎಂದು ದಲಿತ ಮುಖಂಡ ಹಾಗೂ ಗ್ರಾಮಸ್ಥ ಗೋಪಾಲ ಕಳಿಂಜೆ ಆಗ್ರಹಿಸಿದ್ದಾರೆ.

Comments are closed.