ಕರಾವಳಿ

ಹೆರಿಗೆ ವೇಳೆ ಮಗು ಸಾವು; ತಾಯಿ ಗಂಭೀರ; ವೈದ್ಯರ ನಿರ್ಲಕ್ಯ್ಷ ಆರೋಪ

Pinterest LinkedIn Tumblr

ಉಡುಪಿ: ಹೇರಿಗೆ ವೇಳೆ ಮಗು ಸಾವನ್ನಪ್ಪಿ, ತಾಯಿ ಗಂಭೀರವಾದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ನಳಿನಿ ಕುಲಾಲ್ (28) ಗಂಭೀರವಾಗಿರುವ ಮಹಿಳೆ.

udupi_garbhini_mahile_serious4

(ನಳಿನಿ ಕುಲಾಲ್)

udupi_garbhini_mahile_serious7 udupi_garbhini_mahile_serious6 udupi_garbhini_mahile_serious5

ಅಲೆವೂರಿನ ಮನೋಹರ್ ಕುಲಾಲ್ ಎನ್ನುವವರ ಜೊತೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ನಳಿನಿ ಅವರಿಗೆ ಇದು ಪ್ರಥಮ ಹೇರಿಗೆಯಾಗಿತ್ತು. ನಳಿನಿ ಕುಲಾಲ್ ಉಡುಪಿಯ ಪೆರ್ಡೂರು ನಿವಾಸಿಯಾಗಿದ್ದು ಎರಡು ದಿನಗಳ ಹಿಂದೆ ಹೇರಿಗೆ ನೋವು ಕಾಣಿಸಿಕೊಂಡ ಕಾರಣದಿಂದಾಗಿ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರ್ಸ್ ಗಳು ಹೇರಿಗೆ ವೇಳೆ ಅವಾಂತರ ಮಾಡಿದ್ದರು ಎನ್ನಲಾಗಿದ್ದು ಮಗುವಿನ ಸಾವಿಗೆ ವೈದ್ಯರ ನಿರ್ಲ್ಯಕ್ಷವೇ ಕಾರಣವೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ.

ಅದ್ರಷ್ಟವಾಶಾತ್ ನಳಿನಿ ಅಪಾಯದಿಂದ ಪಾರಾಗಿದ್ದಾರೆ.

Comments are closed.