
ಹೈದರಾಬಾದ್: ಬೇಲಿಯೇ ಎದ್ದು ಹೊಲ ಮೇಯ್ದರೆ? ಎಂಬ ಗಾದೆಯಂತೆ ಕಳ್ಳತನದ ಆರೋಪದಲ್ಲಿ ಹೈದರಾಬಾದ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ.
ಹೈದರಾಬಾದ್ ಹೊರವಲಯದ ಸೈದರಾಬಾದ್ ಮೆಟ್ರೋಪಾಲಿಟನ್ ಪೊಲೀಸ್ ಠಾಣೆಯ ಪ್ರದೇಶದ ಮೀರ್ಪೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಲ್ಮಾಸ್ಗುಡದ ಮನೆಯೊಂದರಲ್ಲಿ ಕಳ್ಳತನ ಮಾಡುವಾಗಲೇ ಈ ಸಬ್ ಇನ್ಸ್ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ.
ಅಲ್ಮಾಸ್ಗುಡದ ನಿವಾಸಿ ಶಿವಪ್ರಸಾದ್ ಗುರುವಾರ ಮತ್ತು ಶುಕ್ರವಾರದ ನಡುವಿನ ರಾತ್ರಿಯ ವೇಳೆಯಲ್ಲಿ ತನ್ನ ಹುಟ್ಟೂರಾದ ಕರೀಂನಗರದಿಂದ ಹಿಂದಿರುಗಿದಾಗ, ಮನೆಯ ಕಿಟಕಿಯ ಸರಳುಗಳು ಮುರಿದು, ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡಿದ್ದಾರೆ.
ನೆರೆಹೊರೆಯವರನ್ನು ಪ್ರಶ್ನಿಸುವಾಗ, ಮನೆಯ ಶೌಚಾಲಯದಿಂದ ಹೊರಬಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಪ್ರಶ್ನಿಸಿದ್ದಾರೆ.
ಆ ವ್ಯಕ್ತಿ ತಾನು ಪೊಲೀಸ್ ಮಹೇಂದರ್ ರೆಡ್ಡಿ ಎಂದು ಹೇಳಿಕೊಂಡು, ಮನೆಯಲ್ಲಿ ಕಳ್ಳತನವಾಗಿದ್ದರ ಬಗ್ಗೆ ಮಾಲೀಕರಿಗೆ ತಿಳಿಸಲು ಬಂದೆ ಎಂದು ಹೇಳಿದಾಗ ಈ ಉತ್ತರದ ಬಗ್ಗೆ ಸಂಶಯ ಪಟ್ಟ ಶಿವಪ್ರಸಾದ್ ಮೀರ್ಪೆಟ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಆ ವ್ಯಕ್ತಿಯನ್ನು ಹಿಡಿಯು ಪೊಲೀಸರು ಪ್ರಶ್ನಿಸಿದಾಗ, ಆವ್ಯಕ್ತಿ ವಿಶೇಷ ತನಿಖಾ ದಳದ (ಎಸ್ ಐ ಟಿ) ಸಬ್ ಇನ್ಸ್ಪೆಕ್ಟರ್ ಎಂದು ತಿಳಿದುಬಂದೆ.
ಪೋಲೀಸರ ತನಿಖೆಯಲ್ಲಿ ರೆಡ್ಡಿ ತಾನು ಭೂಗತ ರೌಡಿ ನಯೀಮ್ ಪ್ರಕರಣವನ್ನು ತನಿಖೆ ಮಾಡಲು ಅಲ್ಲಿಗೆ ತೆರಳಿದ್ದೆ ಎಂದಿದ್ದಾರೆ ಆದರೆ ಹೆಚ್ಚುವರಿ ತನಿಖೆಗಳ ಮೂಲಕ ಆ ಪ್ರಕರಣವನ್ನು ತನಿಖೆ ಮಾಡುತ್ತಿರುವ ತಂಡದಲ್ಲಿ ರೆಡ್ಡಿ ಇಲ್ಲದಿರುವುದು ಕೂಡ ತಿಳಿದಿದೆ.
ಸಬ್ ಇನ್ಸ್ಪೆಕ್ಟರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ, ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
Comments are closed.