ಮಂಗಳೂರು: ಸಾಲ್ಮರದ ಕುಟುಂಬವೊಂದರ ಕುರಿತು ವಾಟ್ಸ್ ಆಫ್ ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ ಅದರ ಜತೆ ಪತ್ರಿಕೆಯೊಂದರ ಲಿಂಕ್ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾರಿಗುಡ್ಡೆಯ ಅಬೂಬಕ್ಕರ್ ಸಿದ್ದಿಕ್ (28), ಪುತ್ತೂರು ಸಾಲ್ಮರ ಜುನೈದ್ (36) ಬಂಧಿತ ಆರೋಪಿಗಳು.
ಸಾಲ್ಮರದ ಕುಟುಂಬದ ಕುರಿತು ಸುಳ್ಳು ಸುದ್ದಿ ಬರೆದು ಸೆ.24ರಂದು ವಾಟ್ಸ್ ಆಯಪ್ನಲ್ಲಿ ಪತ್ರಿಕೆಯೊಂದರ ಲಿಂಕ್ ಜತೆ ಆರೋಪಿಗಳು ವಿಷಯ ಹರಡಿಸಿದ್ದರು.
ಈ ಬಗ್ಗೆ ಪತ್ರಿಕೆಯ ಸಂಪಾದಕರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಅ.1ರಂದು ಪುತ್ತೂರು ಅರುಣಾ ಥಿಯೇಟರ್ ಬಳಿಯಿಂದ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಲೇಜು ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಮೂಡಬಿದಿರೆ: ಇಲ್ಲಿನ ಪ.ಪೂ. ಕಾಲೇಜೊಂದರ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದ ಅಶ್ವಿನಿ (18) ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತ±ಟ್ಟರು. ಮೂಲತ: ಬಳ್ಳಾರಿಯ ಅಶ್ವಿನಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.ಒಂದು ಪಿರೀಯಡ್ ಮುಗಿಸಿ ಇನ್ನೊಂದು ತರಗತಿಗೆ ತೆರಳುತ್ತಿರುವಾಗ ಆಕೆ ಏಕಾಏಕಿ ಕೆಳಗೆ ಧುಮುಕಿದರು.
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದರೂ ಫಲಕಾರಿಯಾ ಗಲಿಲ್ಲ ಆತ್ಮಹತ್ಯೆಗೆ ವೈಯಕ್ತಿಕ ಅಥವಾ ಕೌಟುಂಬಿಕ ಸಮಸ್ಯೆ ಕಾರಣ ವಿರಬೇಕೆಂದು ಪೊಲೀ ಸರು ಶಂಕಿಸಿದ್ದಾರೆ.
ನಂತೂರಿನಲ್ಲಿ ಅಪಘಾತ : ಇಬ್ಬರಿಗೆ ಗಾಯ
ಮಂಗಳೂರು: ನಂತೂರ್ ಜಂಕ್ಷನ್ನಲ್ಲಿ ಅ. 11 ರಂದು ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಮನೋಹರ ಮತ್ತು ಪ್ರಯಾಣಿಕರಾದ ಅನೀಶ್ ಹಾಗೂ ಕಾರ್ತಿಕ್ ಗಾಯಗೊಂಡಿದ್ದಾರೆ. ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲೊಬ್ಬ 25 ಅಂಗಿ, 8 ಪ್ಯಾಂಟ್ ಧರಿಸಿ ಬಂಧನಕ್ಕೊಳಗಾದ ಭೂಪ
ಬೆಳ್ತಂಗಡಿ: ಪಟ್ರಮೆ ಸಮೀಪದ ಉಳಿಯದ ಅಂಗಡಿಯೊಂದರ ಎದುರು ನಿಲ್ಲಿಸಿದ್ದ ಬೈಕ್ ಕದಿಯಲು ಆಗಮಿಸಿದ್ದ ಎಂಬ ಗುಮಾನಿ ಮೇರೆಗೆ ಸಾರ್ವಜನಿಕರು ವ್ಯಕ್ತಿಯೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ತನಿಖೆ ನಡೆಸಿದರೆ ಆ ಆಸಾಮಿ ಒಂದರ ಮೇಲೊಂದರಂತೆ 25 ಅಂಗಿ ಧರಿಸಿದ್ದ, ಪ್ಯಾಂಟಿನ ಮೇಲೆ ಪ್ಯಾಂಟು ಎಂದು 8 ಪ್ಯಾಂಟ್ ಹಾಕಿದ್ದ, 3 ಚಡ್ಡಿ ಹಾಕಿದ್ದ!
ಪಟ್ರಮೆ ಗ್ರಾಮದ ಮಿತ್ತಲಿಕ್ಕಳ ಕೃಷ್ಣಪ್ಪ ಗೌಡ ಉಳಿಯದ ಆಂಗಡಿಗೆ ಬಂದವರು ರಸ್ತೆ ಬದಿ ಬೈಕ್ ನಿಲ್ಲಿಸಿದ್ದರು. ಈ ಸಂದರ್ಭ ಧರ್ಮಸ್ಥಳ ಕಡೆಯಿಂದ ಆಗಮಿಸಿದ ಅಪರಿಚಿತ ವ್ಯಕ್ತಿ ಬೈಕನ್ನು ತಳ್ಳಿಕೊಂಡು ಮುಂದೆ ಹೋದ. ಸ್ವಲ್ಪ ದೂರ ಹೀಗೆ ಹೋದುದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಹಸ್ತಾಂತರಿಸಿದರು.
ಧರ್ಮಸ್ಥಳ ಪೊಲೀಸರು ವಿಚಾರಿಸಿದಾಗ ಆತನ ಯಾವುದೇ ಕಳ್ಳತನದ ಇತಿಹಾಸ ಇರಲಿಲ್ಲ. ತುಮಕೂರಿನ ಗಂಗಾಧರ ಎಂದು ವಿಚಾರಣೆಯಿಂದ ತಿಳಿದು ಬಂತು. ತುಮಕೂರು ಹಾಗೂ ಇತರ ಪೊಲೀಸ ಠಾಣೆಗಳಲ್ಲಿ ವಿಚಾರಿಸಿದಾಗ, ಆತನ ಮನೆಗೆ ಪೊಲೀಸರನ್ನು ಕಳುಹಿಸಿದಾಲೂ ಈ ಹಿಂದೆ ಕಳ್ಳತನ ಮಾಡಿದ ಮಾಹಿತಿ ಯಾವುದೂ ದೊರೆಯಲಿಲ್ಲ. ಧರ್ಮಸ್ಥಳ ಪೊಲೀಸರು ಆತನ ಮನೆಯವರನ್ನು ಕರೆಸಲು ವ್ಯವಸ್ಥೆ ಮಾಡಿದರು ಆತ ಮಂದಮತಿಯಂತೆ ವರ್ತಿಸುತ್ತಿದ್ದ.