ಕರಾವಳಿ

ದೇವದಾಸ್ ಕಾಪಿಕಾಡ್‌ರ `ಬರ್ಸ’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ : ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

Pinterest LinkedIn Tumblr

barsa_release_1

ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾದ ಬರ್ಸ ತುಳು ಚಲನ ಚಿತ್ರ ಅಕ್ಟೋಬರ್ ೧೩ರಂದು ಗುರುವಾರ ನಗರದ ಸುಚಿತ್ರ ಚಿತ್ರಮಂದಿರದಲ್ಲಿ ತೆರೆಕಂಡಿತು.

ತುಳು ಚಲನ ಚಿತ್ರದ ನಿರ್ಮಾಕರ ಸಂಘದ ಅಧ್ಯಕ್ಷ ಟಿ.ಎ.ಶ್ರೀನಿವಾಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುವಿನಲ್ಲಿ ತರೆಕಂಡ ೭೪ನೇ ಸಿನಿಮಾ `ಬರ್ಸ’ ಯಶಸ್ವಿ ಪ್ರದರ್ಶನವನ್ನು ಕಾಣುವಂತಾಗಲಿ, ತುಳು ಸಿನಿಮಾರಂಗ ಬೆಳೆಯುತ್ತಿರುವ ವೇಗವನ್ನು ಕಂಡಾಗ ಖುಷಿಯಾಗುತ್ತದೆ. ತುಳು ಸಿನಿಮಾಗಳು ಉತ್ತಮ ಗುಣಮಟ್ಟದಲ್ಲಿ ತಯಾರಾಗಲಿ ಎಂದು ಅವರು ಶುಭ ಹಾರೈಸಿದರು.

barsa_release_2 barsa_release_3 barsa_release_4 barsa_release_5 barsa_release_6 barsa_release_7 barsa_release_8 barsa_release_9 barsa_release_10 barsa_release_11 barsa_release_12

ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಚಿತ್ರ ನಿರ್ಮಾಪಕರಾದ ಆರ್.ಧನರಾಜ್, ಕಿಶೋರ್ ಡಿ.ಶೆಟ್ಟಿ , ಪ್ರಕಾಶ್ ಪಾಂಡೇಶ್ವರ್, ರಾಜೇಶ್ ಬ್ರಹ್ಮಾವರ, ಉದ್ಯಮಿಗಳಾದ ಸುರೇಂದ್ರ ಬಂಗೇರ, ರಮೇಶ್ ಬಂಗೇರ, ಬರ್ಸ ಚಿತ್ರದ ನಿರ್ಮಾಪಕರಾದ ಶರ್ಮಿಳಾ ದೇವದಾಸ್ ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ ಕಿಣಿ, ಕಾರ್ಯಕಾರಿ ನಿರ್ಮಾಪಕ ಸಚಿನ್ ಎ‌ಎಸ್ ಉಪ್ಪಿನಂಗಡಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಾಧವ ಬಗಂಬಿಲ, ಗೀತಾನಂದ ಶೆಟ್ಟಿ, ಕಲಾವಿದರಾದ ಚೇತನ್ ರೈ ಮಾಣಿ, ಸಂತೋಷ್ ಶೆಟ್ಟಿ, ಗೋಪಿನಾಥ ಭಟ್, ತಿಮ್ಮಪ್ಪ ಕುಲಾಲ್, ಪಿ.ಎಲ್.ರವಿ, ಸುಜೀತ್ ನಾಯಕ್, ಭೋಜರಾಜ ವಾಮಂಜೂರು, ರಾಜೇಶ್ ಕುಡ್ಲ, ನಾಯಕ ನಟ ಅರ್ಜುನ್ ಕಾಪಿಕಾಡ್, ನಟಿ ಕ್ಷಮಾ ಶೆಟ್ಟಿ, ಕಾವ್ಯ ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕ ದೇವದಾಸ್ ಕಾಪಿಕಾಡ್ ಸ್ವಾಗತಿಸಿದರು. ಆರ್.ಜೆ ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.

ಬರ್ಸ ಸಿನಿಮಾ ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ಸಿನೆಮಾಸ್, ಪಿವಿ‌ಆರ್, ಸಿನಿಪೊಲಿಸ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‌ನಲ್ಲಿ ನಟರಾಜ್, ಮಣಿಪಾಲದಲ್ಲಿ ಐನಾಕ್ಸ್ ಚಿತ್ರ ಮಂದಿರದಲ್ಲಿ ತೆರೆಕಂಡಿದೆ.

ಅರ್ಜುನ್‌ಕಾಪಿಕಾಡ್ ನಾಯಕನಟನಾಗಿರುವ ಬರ್ಸ ಸಿನಿಮಾದಲ್ಲಿ ಲವ್ ಸೆಂಟಿಮೆಂಟ್, ಫೈಟ್ ಕ್ವಾಮಿಡಿ ಎಲ್ಲವೂ ಇದೆ. ಕ್ಷಮಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷಣ್‌ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ತಿಮ್ಮಪ್ಪಕುಲಾಲ್, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸುರೇಶ್ ಕುಲಾಲ್, ಮೊದಲಾದವರು ತಾರಾಗಣದಲ್ಲಿದ್ದಾರೆ.

ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ, ಪಿ.ಎಲ್.ರವಿ. ಛಾಯಾಗ್ರಹಣ, ಸಾಹಸ:ಮಾಸ್ ಮಾದ ಸಂಕಲನ:ಸುಜಿತ್ ನಾಯಕ್, ಸಚಿನ್ ಎ‌ಎಸ್ ಉಪ್ಪಿನಂಗಡಿ ಎಕ್ಸ್‌ಕ್ಯೂಟಿವ್ ಪ್ರೋಡ್ಯೂಸರ್, ನಿರ್ಮಾಣ ನಿರ್ವಹಣೆ ರಾಜೇಶ್ ಕುಡ್ಲ, ಕತೆ, ಚಿತ್ರಕತೆ, ಸಾಹಿತ್ಯ ಸಂಭಾಷಣೆ, ನಂದೀತ, ನಿರ್ದೇಶನ ದೇವದಾಸ್ ಕಾಪಿಕಾಡ್, ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ ಕಿಣಿ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಕ್ಕಾಗಿ ಬಹುಭಾಷ ಗಾಯಕ ಕಾರ್ತಿಕ್, ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ರೂಪಾ ಮಹಾದೇವನ್ ಹಾಡಿದ್ದಾರೆ.

barsa_release_13 barsa_release_14 barsa_release_15 barsa_release_16 barsa_release_17 barsa_release_18 barsa_release_19 barsa_release_20 barsa_release_21 barsa_release_22 barsa_release_23 barsa_release_24 barsa_release_25 barsa_release_26 barsa_release_27 barsa_release_28

ತಾಸೆದ ಪೆಟ್ಟ್‌ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನಾ.

ತಾಸೆದ ಪೆಟ್ಟ್‌ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನಾ..ಆಸೆದ ಕಣ್ಣ್‌ಡ್ ಊರುದ ಪೊಣ್ಣುಲು ತೆಲಿಪುನ ಮರ್ಲ್ ತೂಯನಾ. ಹಾಗೂ ಸತ್ಯೊದಾ ತುಡರಗೇ.. ತುಳುನಾಡ್ ಬೊಲ್ಪಾತ್ಂಡ್ ಹಾಡು ಈಗ ಸಿನಿಪ್ರೇಕ್ಷಕರ ಬಾಯಲ್ಲಿ ಗುಣುಗುಟ್ಟುತ್ತಿದೆ. ತಾಸೆದ ಪೆಟ್ಟ್ ಹಾಡು ತುಳು ನಾಡಿನ ಹುಲಿವೇಷ ಕುಣಿತವನ್ನು ಬಿಂಬಿಸುತ್ತದೆ. ಸತ್ಯದಾ ಆ ತುಡರ್ ಹಾಡು ದೈವಭಕ್ತಿಯನ್ನು ಹೆಚ್ಚಿಸುತ್ತಿದೆ. ಈ ಎರಡೂ ಹಾಡುಗಳನ್ನು ಹಾಡಿದ್ದು ನಿರ್ದೇಶಕ ದೇವದಾಸ್ ಕಾಪಿಕಾಡ್. ಚಿತ್ರದಲ್ಲಿ ಬರುವ ಮತ್ತೆ ಎರಡು ಹಾಡುಗಳು ಮೋನೆಡ್ ನಿನ್ನ ಹಾಗೂ ಓ ಮೈ ಬೇಬಿ ಹಾಡನ್ನು ಅರ್ಜುನ್ ಕಾಪಿಕಾಡ್ ಹಾಡಿದ್ದಾರೆ. ತಂದೆ ಮಗ ಹಾಡಿದ ನಾಲ್ಕು ಹಾಡುಗಳು ಈಗ ಸೂಪರ್ ಹಿಟ್‌ಆಗಿದೆ.

__ಸತೀಶ್ ಕಾಪಿಕಾಡ್

Comments are closed.