ಉಡುಪಿ: ಮನೆಯ ಸಾಕು ನಾಯಿಯನ್ನು ಮಹಿಳೆಯೋರ್ವರ ಮೇಲೆ ಛೂ ಬಿಟ್ಟು ಕಚ್ಚಿಸಿದ ಬಗ್ಗೆ ಗಾಯಾಳು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನಾಯಿಯನ್ನು ಚೂ ಬಿಟ್ಟ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.
ನಳಿನಿ ಎಂಬಾಕೆ ದೂರು ನೀಡಿದ್ದು ಸುಮಾ ಎನ್ನುವಾಕೆ ನಾಯಿಯಿಂದ ಕಚ್ಚಿಸಿದ್ದಲ್ಲದೇ ಈ ಬಗ್ಗೆ ಕೇಳಿದ್ದಕ್ಕೆ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದ ಬಗ್ಗೆ ಆರೋಪಿಸಲಾಗಿದೆ.
ಉಡುಪಿ ಕಾರ್ಕಳದ ಅಂಡಾರುವಿನ ನಿವಾಸಿ ನಳಿನಿ ಎನ್ನುವ ಮಹಿಳೆ ಕಾರ್ಖಾನೆಗೆ ಸುಲಿದ ಗೇರು ಬೀಜವನ್ನು ಕೊಡಲು ಹೊರಟಿದ್ದ ವೇಳೆ ಆರೋಪಿ ಸುಮಾ ಎಂಬುವವರು ತನ್ನ ಸಾಕು ನಾಯಿಯನ್ನು ಕಚ್ಚುವಂತೆ ಚೂ ಬಿಟ್ಟಿದ್ದು, ನಾಯಿಯು ನಳಿನಿ ಯವರ ಬಲಕಾಲಿನ ಮೊಣಕಾಲು ಗಂಟಿನ ಮೇಲ್ಬಾಗಕ್ಕೆ ಕಚ್ಚಿ ರಕ್ತಗಾಯಗೊಳಿಸಿದೆ ಎನ್ನಲಾಗಿದೆ. ಈ ಬಗ್ಗೆ ನಳಿನಿಯವರು ಸುಮಾರವರ ಬಳಿ ಹೇಳಿದ್ದು ಇದಕ್ಕೆ ಸಿಟ್ಟುಗೊಂಡ ಆರೋಪಿ ಸುಮಾ ಅವಾಚ್ಯ ಶಬ್ದಗಳಿಂದ ಬೈಯ್ದು ಅಲ್ಲಿಯೇ ಇದ್ದ ಬೊಂಡಾದ ಚಿಪ್ಪಿನಿಂದ ನಳಿನಿಯ ಎದೆಗೆ ಹೊಡೆದು ಕಾಲಿನಿಂದ ಎದೆಗೆ ಹಾಗೂ ಬೆನ್ನಿಗೆ ತುಳಿದು ನೊವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
(ಸಾಂದರ್ಭಿಕ ಚಿತ್ರ)
Comments are closed.