ಮಂಗಳೂರು,ಅ.10: ಫೇಸ್‌ಬುಕ್‌ನಲ್ಲಿ ಕಟೀಲು ದೇವಿಯ ಬಗ್ಗೆ ಅವಮಾನಿಸಿ ಪೋಸ್ಟ್ ಕಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಳ್ಯದ ಬೀಡುಮನೆ ನಿವಾಸಿ ಶಾಫಿ ಬೆಳ್ಳಾರೆ (26) ಎಂದು ಗುರುತಿಸಲಾಗಿದೆ.
ಈತ ಫೇಸ್‌ಬುಕ್‌ನಲ್ಲಿ ಕಟೀಲು ದೇವಿಯ ನಿಂದನೆ ಮಾಡಿ ಪೋಸ್ಟ್ ಕಮೆಂಟ್ ಹಾಕಿದ್ದಾನೆ ಎನ್ನಲಾಗಿದ್ದು, ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈತನ ಬಂಧನಕ್ಕೆ ಈ ಹಿಂದೆಯೇ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದ್ದು, ಭಾನುವಾರ ಆತ ಬಹ್ರೈನ್‌ನಿಂದ ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಂ ತಿಳಿಸಿದ್ದಾರೆ.
Comments are closed.