ಕರಾವಳಿ

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಪಮಾನ; ಕುಂದಾಪುರದಲ್ಲಿ ಕೇಜ್ರಿವಾಲ್, ಸಿಂಗ್, ಸಂಜಯ್ ಪ್ರತಿಕೃತಿ ದಹಿಸಿದ ಎಬಿವಿಪಿ

Pinterest LinkedIn Tumblr

ಕುಂದಾಪುರ: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿ ಸಾಕ್ಷ್ಯ ನೀಡುವಂತೆ ಹೇಳಿದ್ದ ಅರವಿಂದ್ ಕೇಜ್ರಿವಾಲ್, ದಿಗ್ವಿಜಯ್ ಸಿಂಗ್ ಹಾಗೂ ಸಂಜಯ್ ನಿರುಪಮ್ ಅವರ ಹೇಳಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು ಘಟಕದ ವತಿಯಿಂದ ಪ್ರತಿಭಟನೆ ಶುಕ್ರವಾರ ಸಂಜೆ ನಡೆಯಿತು.

kundapura_abvp_protest-7 kundapura_abvp_protest-3 kundapura_abvp_protest-2 kundapura_abvp_protest-6 kundapura_abvp_protest-5 kundapura_abvp_protest-11 kundapura_abvp_protest-10 kundapura_abvp_protest-9 kundapura_abvp_protest-4 kundapura_abvp_protest-8 kundapura_abvp_protest-1

ಈ ಸಂದರ್ಭ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಮಾತನಾಡಿ, ಭಾರತೀಯ ಸೇನೆ ಮಾಡಿದ ಶ್ಲಾಘನೀಯ ಕಾರ್ಯ ಹಾಗೂ ಪಾಕಿಸ್ತಾನಕ್ಕೆ ನೀಡಿದ ಉತ್ತ್ಗರವನ್ನು ಇಡೀ ದೇಶವೇ ಕೊಂಡಾಡುತ್ತಿದ್ದ ಸಮಯದಲ್ಲಿ ಅರವಿಂದ ಕೇಜ್ರಿವಾಲ್, ದಿಗ್ವಿಯಜ್ ಸಿಂಗ್ ಹಾಗೂ ಸಂಜಯ್ ನಿರುಪಮ್ ಹೇಳಿದ ಹೇಳಿಕೆ ದೇಶದ್ರೋಹಿಯಾಗಿದೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ನೀಡಿ ಎಂದು ಹೇಳಿಕೆ ನೀಡುವ ಕೇಜ್ರಿವಾಲ್ ದೆಹಲಿಯಲ್ಲಿ ಬೆಚ್ಚನೆಯ ಕೊಠಡಿಯೊಳಗೆ ಕೂತು ರಾಜಕೀಯ ಮಾಡುತ್ತಾ ಆರಾಮವಾಗಿರಬೇಕೆಂದರೇ ಅದು ದೇಶ ಕಾಯುವ ಸೈನ್ಯದಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸರ್ಜಿಕಲ್ ಸ್ಟ್ರೈಕ್ ನಡೆದ ಕೆಲವೇ ದಿನಗಳಲ್ಲಿ ಸೇನಾ ಮುಖ್ಯಸ್ಥರು ಪ್ರೆಸ್ ಮೀಟ್ ನಡೆಸಿ ದಾಳಿಯ ಬಗ್ಗೆ ಅಧೀಕ್ರತವಾಗಿ ಹೇಳಿಕೆ ನೀಡಿದ್ದು ಅದನ್ನು ಕೂಡ ನಂಬದೇ ಅವರಿಗೆ ಅವಮಾನವಾಗುವ ರೀತಿ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಇನ್ನು ಸರ್ಜಿಕಲ್ ಸ್ಟ್ರೈಕ್ ಫೇಕ್ ಎನ್ನುವ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್‌ಗೆ ನಾಚಿಕೆಯಾಗಬೇಕು ಎಂದು ತೇಜಸ್ವಿ ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್, ದಿಗ್ವಿಜಯ್ ಸಿಂಗ್ ಹಾಗೂ ಸಂಜಯ್ ನಿರುಪಮ್ ಭಾವಚಿತ್ರಗಳ ಮುಖಕ್ಕೆ ಎಬಿವಿಪಿ ವಿದ್ಯಾರ್ಥಿಗಳು ಕಪ್ಪು ಮಸಿ ಸುರಿದು ಮೂವರ ಪ್ರತಿಕೃತಿಗಳನ್ನು ಧಹಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.

Comments are closed.